ETV Bharat / international

ಪಾಕಿಸ್ತಾನ: ಶೂಟೌಟ್​ನಲ್ಲಿ ಮೂವರು ಉಗ್ರರ ಹತ್ಯೆ, ಓರ್ವ ಪಾಕ್​ ಯೋಧ ಹುತಾತ್ಮ

ನೈರುತ್ಯ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭದ್ರತಾ ಗಸ್ತು ಮೇಲೆ ಉಗ್ರರು ನಡೆಸಿದ ದಾಳಿಯ ನಂತರ ಪಾಕಿಸ್ತಾನದ ಭದ್ರತಾ ಪಡೆಗಳು ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿವೆ ಎಂದು ಸೇನೆ ತಿಳಿಸಿದೆ.

shootout
ಪಾಕಿಸ್ತಾನ
author img

By

Published : Aug 14, 2021, 5:39 PM IST

ಕ್ವೆಟ್ಟಾ: ಪಾಕಿಸ್ತಾನದ ಭದ್ರತಾ ಪಡೆಗಳು ಶನಿವಾರ ನಡೆದ ಶೂಟೌಟ್​ನಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದು, ನೈರುತ್ಯ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭದ್ರತಾ ಗಸ್ತಿನ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ ಎಂದು ಸೇನೆ ತಿಳಿಸಿದೆ.

ತನ್ನ ಹೇಳಿಕೆಯಲ್ಲಿ, ಲೊರಲೈ ಜಿಲ್ಲೆಯ ಶಹರಿಗ್ ಬಳಿ ಉಗ್ರರು ಭದ್ರತಾ ವಾಹನದ ಮೇಲೆ ಗುಂಡು ಹಾರಿಸಿದ ನಂತರ ಎನ್​​​ಕೌಂಟರ್​​​ ನಡೆಸಿದ್ದಾಗಿ ಪಾಕ್​ ಸೇನೆ ಹೇಳಿದೆ. ಇನ್ನು ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ತಕ್ಷಣಕ್ಕೆ ಈ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತು ಕೊಂಡಿಲ್ಲ. ಆದರೆ, ಬಲೂಚ್ ಪ್ರತ್ಯೇಕತಾವಾದಿ ಗುಂಪುಗಳು ಇತ್ತೀಚಿನ ದಿನಗಳಲ್ಲಿ ಇಂತಹ ದಾಳಿಗಳ ಬಗ್ಗೆ ಹೇಳಿಕೊಂಡಿದ್ದವು.

ಬಲೂಚಿಸ್ತಾನವು ಇರಾನ್ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ಖನಿಜ ಮತ್ತು ಅನಿಲ ಸಮೃದ್ಧ ಪ್ರಾಂತ್ಯಕ್ಕೆ ಸ್ವಾತಂತ್ರ್ಯ ಕೋರಿ ಗುಂಪುಗಳಿಂದ ಆಗಾಗ್ಗೆ ಉಗ್ರಗಾಮಿ ದಾಳಿಗಳು ಮತ್ತು ಬಂಡಾಯಗಳು ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.ಪಾಕಿಸ್ತಾನಿ ತಾಲಿಬಾನ್ ಕೂಡ ಅಲ್ಲಿ ತನ್ನ ಅಸ್ತಿತ್ವ ಹೊಂದಿದೆ.

ಇದನ್ನೂ ಓದಿ:ಕಾಬೂಲ್ ಹೊಸ್ತಿಲಲ್ಲಿ ತಾಲಿಬಾನ್: ರಾಜೀನಾಮೆಗೆ ಸಿದ್ಧರಾದ್ರಾ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.