ETV Bharat / international

ಗಡಿಯಲ್ಲಿ ಮತ್ತೆ ಪಾಕ್‌ ಪುಂಡಾಟ; ಮಚಲಿ ಸೆಕ್ಟರ್‌ನಲ್ಲಿ ಅಪ್ರಚೋದಿತ ಗುಂಡಿನ ದಾಳಿ - ಎಲ್‌ಒಸಿ

ಗಡಿಯಲ್ಲಿ ಮತ್ತೆ ಮತ್ತೆ ಕಾಲು ಕೆರೆಯುತ್ತಿರುವ ಪಾಕ್‌ ಸೇನೆ ಕುಪ್ವಾರಾ ಜಿಲ್ಲೆಯ ಮಚಲಿ ಸೆಕ್ಟರ್‌ನಲ್ಲಿ ಇಂದು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆ ಕೂಡ ತಕ್ಕ ಪ್ರತ್ಯುತ್ತರವನ್ನು ನೀಡಿದೆ.

pak-violates-ceasefire-fires-mortal-shells-towards-indian-positions-in-jammu-and-kashmirs-macchil-sector
ಗಡಿಯಲ್ಲಿ ಮತ್ತೆ ಪಾಕ್‌ ಪುಂಡಾಟ; ಮಚಲಿ ಸೆಕ್ಟರ್‌ನಲ್ಲಿ ಅಪ್ರಚೋದಿತ ಗುಂಡಿನ ದಾಳಿ
author img

By

Published : Jun 18, 2020, 6:04 PM IST

ಶ್ರೀನಗರ: ಗಡಿಯಲ್ಲಿ ಪಾಕ್‌ ಪುಂಡಾಟ ಮುಂದುವರಿದಿದ್ದು ಜಮ್ಮು-ಕಾಶ್ಮೀರದ ಮಚಲಿ ಸೆಕ್ಟರ್‌ನ ಎಲ್‌ಒಸಿಯಲ್ಲಿ ಪಾಕಿಸ್ತಾನದ ಸೇನೆ ಕದನ ವಿರಾಮ ಉಲ್ಲಂಘಿಸಿ ಇಂದು ಕೂಡ ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ.

ಪಾಕ್‌ ಸೇನೆ ಭಾರತದ ಗಡಿಯತ್ತ ಮಾರ್ಟಾರ್‌‌ ಶೆಲ್‌ ಮತ್ತು ಇತರೆ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಕಳೆದ ಭಾನುವಾರ ಪೂಂಚ್‌ನ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯಲ್ಲಿ ಶತ್ರು ಸೇನಾ ಪಡೆಗಳು ನಡೆಸಿದ್ದ ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿ ಇಬ್ಬರ ಗಾಯಗೊಂಡಿದ್ದರು. ಪೇದ ಪೇದೆ ಗಡಿಯಲ್ಲಿ ಪಾಕ್‌ ಕಿತಾಪತಿ ಮಾಡುತ್ತಿದ್ದು, ಭಾರತೀಯ ಸೇನೆ ಕೂಡ ತಕ್ಕ ಪ್ರತ್ಯುತ್ತರ ನೀಡುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.