ಇಸ್ಲಾಮಾಬಾದ್: ಪಾಕಿಸ್ತಾನ ತನ್ನ ಆರಂಭಿಕ ಕರಡು ವರದಿಯನ್ನು ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇರಿಸಿರುವ ಭಯೋತ್ಪಾದಕರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಗೆ (ಎಫ್‌ಎಟಿಎಫ್) ಸಲ್ಲಿಸಿದೆ.
ಭಯೋತ್ಪಾದಕ ಧನ ಸಹಾಯದ ಬಗೆಗಿನ 27 ಆಕ್ಷನ್ ಪಾಯಿಂಟ್‌ಗಳಲ್ಲಿ ಉಳಿದ 13 ಪಾಯಿಂಟ್ ಉಗ್ರ ಪರ ಇರುವುದು ಕಾಣುತ್ತಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಪ್ಲೀನರಿ ಸಭೆಗು ಮುನ್ನ ದಿ ನ್ಯೂಸ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.
ಪಾಕಿಸ್ತಾನವು ಉಗ್ರ ಚಟುವಟಿಕೆಗಳ ವಿರುದ್ಧದ ತನ್ನ ಪ್ರಗತಿಯ ವರದಿಯ ನವೀಕರಿಸಿದ ಆವೃತ್ತಿಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಎಫ್ಎಟಿಎಫ್ನ ಪರಿಶೀಲನಾ ತಂಡದೊಂದಿಗೆ ಹಂಚಿಕೊಳ್ಳಲಿದೆ ಎಂದು ಉನ್ನತ ಅಧಿಕೃತ ಮೂಲಗಳು ತಿಳಿಸಿವೆ. ಮೊದಲ ಕರಡನ್ನು ಆಗಸ್ಟ್ 6ರಂದು ಎಫ್‌ಎಟಿಎಫ್‌ಗೆ ಕಳುಹಿಸಲಾಗಿದೆ.
ಎಫ್‌ಎಟಿಎಫ್ ಪರಿಶೀಲನಾ ಗುಂಪಿನ ವರ್ಚ್ಯುವಲ್ ಸಭೆ ಸೆಪ್ಟೆಂಬರ್ 14ರಿಂದ 21ರವರೆಗೆ ನಡೆಯಲಿದ್ದು, ಅಲ್ಲಿ ಪಾಕಿಸ್ತಾನದ ಅಧಿಕಾರಿಗಳಿಗೆ ತಮ್ಮ ಸ್ಥಾನವನ್ನು ಪೂರ್ಣ ಬಲದಿಂದ ರಕ್ಷಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.