ETV Bharat / international

ಗುರುದ್ವಾರದಲ್ಲಿ ಹಿಂಸಾಚಾರ ಪ್ರಚೋದಿಸಿದ ವ್ಯಕ್ತಿ ಬಂಧಿಸಿದ ಪಾಕ್​ ಪೊಲೀಸ್​ - ನಾಂಕಿನ್​ ಸಾಹಿಬ್​ ಗುರುದ್ವಾರ ದ್ವಂಸ ಪ್ರಕರಣ

ನಾಂಕಿನ್​ ಸಾಹಿಬ್​ ಗುರುದ್ವಾರದಲ್ಲಿ ವಾರದ ಹಿಂದೆ ನಡೆದ ಹಿಂಸೆಯನ್ನು ಪ್ರಚೋದಿಸಿದ್ದಾನೆ ಎಂಬ ಆರೋಪದಡಿ ಇಮ್ರಾನ್​ ಚಿಶ್ತಿ ಎಂಬಾತನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.

pak-police-arrested
ಗುರುದ್ವಾರದಲ್ಲಿ ಹಿಂಸಾಚಾರ ಪ್ರಚೋದಿಸಿದ ವ್ಯಕ್ತಿ ಬಂಧಿಸಿದ ಪಾಕ್​ ಪೊಲೀಸ್​
author img

By

Published : Jan 6, 2020, 9:46 AM IST

ಪಂಜಾಬ್​/ಪಾಕಿಸ್ತಾನ : ನಾಂಕಿನ್​ ಸಾಹಿಬ್​ ಗುರುದ್ವಾರದಲ್ಲಿ ವಾರದ ಹಿಂದೆ ನಡೆದ ಹಿಂಸೆಯನ್ನು ಪ್ರಚೋದಿಸಿದ್ದಾನೆ ಎಂಬ ಆರೋಪದಡಿಯಲ್ಲಿ ಇಮ್ರಾನ್​ ಚಿಶ್ತಿ ಎಂಬಾತನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಗುರುದ್ವಾರದಲ್ಲಿ ನಡೆದ ಘಟನೆಯ ನಂತರ ಚಿಶ್ತಿ ಮನೆಯಲ್ಲಿ ಕುಳಿತು ಕ್ಷಮೆಯಾಚಿಸುವ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದ ಕಾರಣದಿಂದಾಗಿ ಚಿಶ್ತಿ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ನಂಕನಾ ಗುರುದ್ವಾರ ಸಾಹಿಬ್​ ಹೊರ ಭಾಗದಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಚಿಶ್ತಿ ಬೆಂಬಲಿಗರು ಗುರುದ್ವಾರಕ್ಕೆ ಕಲ್ಲು ತೂರುವ ಮೂಲಕ ಚಿಶ್ತಿ ಯನ್ನು ಬಿಡುಗಡೆ ಮಾಡುವಂತೆ ಪ್ರತಿಭಟನೆ ನಡೆಸುತ್ತಿದ್ದರು. ನಂತರ ಎಚ್ಚೆತ್ತ ಪೊಲೀಸರು ಹಿಂಸಾಚಾರಕ್ಕೆ ಪ್ರೇರೇಪಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದರು.

ಈ ಹಿಂಸಾಚಾರಕ್ಕೆ ಕಾರಣ ಏನು?
ಚಿಶ್ತಿ ಸಹೋದರ ಎಹ್ಸಾನ್​ ಎಂಬಾತ ಸಿಖ್ ಹುಡುಗಿ ಜಗ್ಜಿತ್ ಕೌರ್‌ನನ್ನು ಅಪಹರಿಸಿ, ಮತಾಂತರ ಮಾಡಿದ್ದ ಎಂಬ ವಿಚಾರವಾಗಿ ಪೊಲೀಸರು ಎಹಾಸನ್​ ಅವರನ್ನ ಬಂಧಿಸಿದ್ದರು. ಇದರಿಂದ ರೊಚ್ಚಿಗೆದ್ದ ಆ ಸಮುದಾಯದ ಹುಡುಗರು ನಂಕಾನಾ ಸಾಹಿಬ್‌ ಹೊರಭಾಗದಲ್ಲಿ ಸಿಖ್​ ವಿರೋಧಿ ಘೋಷಣೆ ಕೂಗಿದ್ದಲ್ಲದೇ ಗುರುದ್ವಾರದ ಮೇಲೆ ಕಲ್ಲು ತೂರಾಟ ನಡೆಸಿದ್ದರು.

Intro:Body:Conclusion:

For All Latest Updates

TAGGED:

national
ETV Bharat Logo

Copyright © 2024 Ushodaya Enterprises Pvt. Ltd., All Rights Reserved.