ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾನುವಾರ ದೇಶದ ಪ್ರಬಲ ಪತ್ತೇದಾರಿ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಕೇಂದ್ರ ಕಚೇರಿಗೆ ಭೇಟಿ ನೀಡಿದ್ದು, ಅಲ್ಲಿ ಇತ್ತೀಚಿನ ಭದ್ರತಾ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದರು.
"ಪ್ರಾದೇಶಿಕ ಮತ್ತು ರಾಷ್ಟ್ರೀಯ ಭದ್ರತಾ ಪರಿಸ್ಥಿತಿಯ ಬಗ್ಗೆ ರಾಷ್ಟ್ರೀಯ ಮತ್ತು ಮಿಲಿಟರಿ ನಾಯಕತ್ವಕ್ಕೆ ಸಮಗ್ರ ಬ್ರೀಫಿಂಗ್ ನೀಡಲಾಗಿದೆ" ಎಂದು ಪ್ರಧಾನಿ ಕಚೇರಿ ಹೇಳಿದೆ.
ಓದಿ:ಕ್ರಿಸ್ಮಸ್ ಹಿನ್ನೆಲೆ ಬಾಗಿಲು ತೆರೆದ ಹೋಲಿ ಲ್ಯಾಂಡ್‌ನಲ್ಲಿರುವ ಕ್ಯಾಥೊಲಿಕ್ ಚರ್ಚ್
ಖಾನ್ ಅವರೊಂದಿಗೆ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ, ಯೋಜನಾ ಸಚಿವ ಅಸಾದ್ ಉಮರ್, ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ, ಜಂಟಿ ಮುಖ್ಯಸ್ಥ ಸಿಬ್ಬಂದಿ ಸಮಿತಿ ಜನರಲ್ ನದೀಮ್ ರಾಜ್, ಏರ್ ಚೀಫ್ ಮಾರ್ಷಲ್ ಮುಜಾಹಿದ್ ಅನ್ವರ್ ಖಾನ್, ನೌಕಾ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್ ಮುಹಮ್ಮದ್ ಅಮ್ಜದ್ ಖಾನ್ ನಿಯಾಜಿ ಮತ್ತು ಮುಖ್ಯ ಜನರಲ್ ಸ್ಟಾಫ್ ಲೆಫ್ಟಿನೆಂಟ್ ಜನರಲ್ ಸಾಹಿರ್ ಶಂಶಾದ್ ಮಿರ್ಜಾ ಭೇಟಿ ನೀಡಿದ್ದು, ಇವರಿಗೆ ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಭದ್ರತಾ ಪರಿಸ್ಥಿತಿ ಕುರಿತು ವಿವರಿಸಿದರು. ಈ ವೇಳೆ, ರಾಷ್ಟ್ರೀಯ ಭದ್ರತೆಗಾಗಿ ಐಎಸ್‌ಐ ಮಾಡುತ್ತಿರುವ ಕಾರ್ಯವನ್ನು ಖಾನ್ ಶ್ಲಾಘಿಸಿದರು.
ಖಾನ್ ಅಧಿಕಾರ ವಹಿಸಿಕೊಂಡಾಗಿನಿಂದ ನಿಯಮಿತವಾಗಿ ಐಎಸ್ಐ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದಾರೆ. ಇಮ್ರಾನ್ ಖಾನ್ ಪ್ರಧಾನಿಯಾದ ನಂತರ ಸೆಪ್ಟೆಂಬರ್ 12, 2018 ರಂದು ಮೊದಲ ಬಾರಿ ಭೇಟಿ ನೀಡಿದ್ದರು.