ಕರಾಚಿ (ಪಾಕಿಸ್ತಾನ): ಕರಾಚಿಯಲ್ಲಿ ಇತ್ತೀಚೆಗೆ ಅಪಘಾತಕ್ಕೀಡಾದ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ಪೈಲಟ್ ವಾಯು ಸಂಚಾರ ನಿಯಂತ್ರಣದ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದರು ಎಂದು ತಿಳಿದು ಬಂದಿದೆ.
ಎ-320 ಏರ್‌ಬಸ್ ಲಾಹೋರ್‌ನಿಂದ ಕರಾಚಿಗೆ 91 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿಯನ್ನು ಕರೆದುಕೊಂಡು ಹೋಗುತ್ತಿತ್ತು. ಆದರೆ, ಕರಾಚಿ ವಿಮಾನ ನಿಲ್ದಾಣದ ಸಮೀಪ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ 99 ಜನರಲ್ಲಿ 97 ಜನರು ಸಾವನ್ನಪ್ಪಿದ್ದು, ಇಬ್ಬರು ಪ್ರಯಾಣಿಕರು ಮಾತ್ರ ಬದುಕುಳಿದಿದ್ದಾರೆ.
ವಾಯು ಸಂಚಾರ ನಿಯಂತ್ರಣದ ವರದಿಯ ಪ್ರಕಾರ, ವಿಮಾನವು ಮಧ್ಯಾಹ್ನ 1:05ಕ್ಕೆ ಲಾಹೋರ್ ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 2:30ಕ್ಕೆ ಕರಾಚಿಯ ಜಿನ್ನಾ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ಇಳಿಯಬೇಕಿತ್ತು. ಆದರೆ, ಪೈಲಟ್ ವಾಯು ಸಂಚಾರ ನಿಯಂತ್ರಣದ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಕಾರಣ ಅಪಘಾತಕ್ಕೀಡಾಗಿದೆ.