ಟೆಲ್ ಅವೀವ್(ಇಸ್ರೇಲ್): ಸಂಸತ್ತಿನ ಚುನಾವಣೆಗಳನ್ನು ಶೀಘ್ರವಾಗಿ ನಡೆಸುವ ಅವಶ್ಯಕತೆ ಇದೆ ಎಂದು ಶೇ. 40 ಕ್ಕೂ ಹೆಚ್ಚು ಇಸ್ರೇಲಿಗಳು ಲಿಕುಡ್ ಪಕ್ಷದ ನಾಯಕ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ದೂಷಿಸುತ್ತಾರೆ. ಆದರೆ ಶೇ.18 ರಷ್ಟು ಜನರು ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್ ಅದಕ್ಕೆ ಕಾರಣರಾಗಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದು ವರದಿ ಮಾಡಿದೆ.
ಬುಧವಾರ ಮುಂಜಾನೆ ಇಸ್ರೇಲ್ನ 120 ಆಸನಗಳ ಏಕಸಭೆಯ ಸಂಸತ್ತಿನ ಸ್ಪೀಕರ್ ಯರಿವ್ ಲೆವಿನ್, ದೇಶದಲ್ಲಿ ಮುಂಬರುವ ಸಂಸತ್ ಚುನಾವಣೆ ಮಾರ್ಚ್ 23, 2021 ರಂದು ನಡೆಯಲಿದೆ ಎಂದು ಘೋಷಿಸಿದ್ದಾರೆ.
ಸಂಸತ್ತಿನ ವಿಸರ್ಜನೆಗೆ ಕೆಲ ಗಂಟೆಗಳ ಮೊದಲು ಅಲ್ಲಿ ನಡೆದ ಮತದಾನದ ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಆದ್ರೆ ಅದಕ್ಕೆ ಪ್ರತಿಕ್ರಿಯಿಸಿದವರ ಕುರಿತು ಯಾವುದೇ ಉಲ್ಲೇಖ ಮಾಡಲಾಗಿಲ್ಲ.
ಇಸ್ರೇಲ್ನ ಶೇ.43 ರಷ್ಟು ಜನರು, ಎರಡು ವರ್ಷಗಳಲ್ಲಿ ನಾಲ್ಕು ಬಾರಿ ಮತದಾನ ನಡೆಯಲು ಪ್ರಧಾನಿ ನೆತನ್ಯಾಹು ಕಾರಣ ಎಂದು ಕಾನ್ ಬ್ರಾಡ್‌ಕಾಸ್ಟರ್‌ಗಾಗಿ ನಡೆಸಿದ ಕಾಂತರ್ ಕಂಪನಿಯ ಸಮೀಕ್ಷೆ ತಿಳಿಸಿದೆ.
ಇದನ್ನೂ ಓದಿ: ಅಂಟಾರ್ಕ್ಟಿಕಾಗೂ ಕಾಲಿಟ್ಟ ಕೋವಿಡ್: 36 ಜನರಲ್ಲಿ ಸೋಂಕು ಪತ್ತೆ
ಇನ್ನು ಪ್ರಧಾನಿ ಹುದ್ದೆಗೆ ಯಾರು ಹೆಚ್ಚು ಸೂಕ್ತ ಅಭ್ಯರ್ಥಿ ಎಂದು ನಡೆಸಿದ ಸಮೀಕ್ಷೆಯಲ್ಲಿ, ಶೇ.39 ರಷ್ಟು ಜನ ಹಾಲಿ ಪ್ರಧಾನಿಯನ್ನು ಆಯ್ಕೆ ಮಾಡಿಕೊಂಡರೆ, ಶೇ.36 ರಷ್ಟು ಜನರು ಮಾಜಿ ಆಂತರಿಕ ಸಚಿವ ಗಿಡಿಯಾನ್ ಸಾರ್ ಅವರನ್ನು ಪಿಎಂ ಸ್ಥಾನದಲ್ಲಿ ನೋಡ ಬಯಸುತ್ತಾರಂತೆ. ಗಿಡಿಯಾನ್ ಅವರು ಇತ್ತೀಚೆಗೆ ಲಿಕುಡ್ ತೊರೆದು ತಮ್ಮದೇ ಸ್ವಂತ ಪಕ್ಷದ ಸ್ಥಾಪನೆಯನ್ನು ಘೋಷಿಸಿದ್ದಾರೆ. ಇನ್ನುಳಿದ ಶೇ. 23ರಷ್ಟು ಮಂದಿ ಯಮಿನಾ ಪಕ್ಷದ ಮುಖಂಡ, ಮಾಜಿ ರಕ್ಷಣಾ ಸಚಿವ ನಫ್ತಾಲಿ ಬೆನೆಟ್ ಅವರನ್ನು ಆಯ್ಕೆ ಮಾಡಿದ್ದಾರೆ.
ಈಗ ಚುನಾವಣೆ ನಡೆದರೆ, ಲಿಕುಡ್‌ಗೆ 28 ಜನಾದೇಶಗಳು (ಹಿಂದಿನ ಮತದಾನಕ್ಕಿಂತ ಮೂರು ಹೆಚ್ಚು), ಗಿಡಿಯಾನ್ ಸಾರ್ ಅವರ ಹೊಸ ಪಕ್ಷಕ್ಕೆ 20 ಸ್ಥಾನಗಳು, ಹಾಗೂ ಯಮಿನಾಗೆ 15 ಸ್ಥಾನಗಳು ಸಿಗಲಿವೆ ಎಂದು ಸಮೀಕ್ಷೆಯು ತೋರಿಸಿದೆ.