ಕೌಲಾಲಂಪುರ್ (ಮಲೇಷ್ಯಾ): ಸುರಂಗ ಮಾರ್ಗದಲ್ಲಿ ಎರಡು ಮೆಟ್ರೋ ಲೈಟ್ ರೈಲುಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಬಂದು ಡಿಕ್ಕಿಯಾಗಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಲೇಷ್ಯಾ ರಾಜಧಾನಿ ಕೌಲಾಲಂಪುರ್ನಲ್ಲಿ ನಡೆದಿದೆ.
ನಿನ್ನೆ ರಾತ್ರಿ ಒಂದೇ ಹಳಿಯಲ್ಲಿ ಖಾಲಿ ಮೆಟ್ರೋ ಲೈಟ್ ರೈಲೊಂದು ಹಾಗೂ 213 ಪ್ರಯಾಣಿಕರಿದ್ದ ಮೆಟ್ರೋ ರೈಲು ಮುಖಾಮುಖಿಯಾಗಿ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ 47 ಜನರ ಸ್ಥಿತಿ ಗಂಭೀರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ನದಿಯಲ್ಲಿ ಮುಳುಗಿದ ದೋಣಿಗಳು: ಮಗು ಸಾವು, 7 ಮಂದಿ ನಾಪತ್ತೆ
ರೈಲುಗಳ ಆಪರೇಷನ್ ಕಂಟ್ರೋಲ್ ರೂಂನ ತಪ್ಪು ಮಾಹಿತಿ ಅಥವಾ ಸಂವಹನ ದೋಷದಿಂದಾಗಿ ಘಟನೆ ನಡೆದಿರಬಹುದು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.