ಇಸ್ಲಾಮಾಬಾದ್(ಪಾಕಿಸ್ತಾನ): ಪಾಕಿಸ್ತಾನದ ಶಾಸಕಿಯೋರ್ವರ (Pakistani woman MLA) ಅಶ್ಲೀಲ ವಿಡಿಯೋ ಎನ್ನಲಾಗಿರುವ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಅದೇ ವಿಚಾರವಾಗಿ ಶಾಸಕಿ ಸಾನಿಯಾ ಆಶಿಕ್ (MLA Sania Ashiq) ಇದೀಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಪಾಕಿಸ್ತಾನ ಮುಸ್ಲಿಂ ಲೀಗ್‌ನ (Pakistan Muslim League) ಶಾಸಕಿ ಸಾನಿಯಾ ಆಶಿಕ್ ಈ ಅಶ್ಲೀಲ ವಿಡಿಯೋದಲ್ಲಿದ್ದಾರೆ ಎನ್ನಲಾಗಿದ್ದು, ಆದರೆ ಇದನ್ನು ಶಾಸಕಿ ಖುದ್ದಾಗಿ ಅಲ್ಲಗಳೆದಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸೈಬರ್ ಕ್ರೈಂ ಠಾಣೆ ಮೆಟ್ಟಿಲೇರಿ ದೂರು ದಾಖಲು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯ ಬಂಧನ ಮಾಡುವಲ್ಲಿ ಲಾಹೋರ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: India vs New Zealand T20: ವಿರಾಟ್ ಕೊಹ್ಲಿ ದಾಖಲೆ ಉಡೀಸ್ ಮಾಡಿದ ಮಾರ್ಟಿನ್ ಗಪ್ಟಿಲ್
ಕಳೆದ ತಿಂಗಳೇ ಈ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಸರ್ಕಾರ ಹಾಗೂ ಕೇಂದ್ರ ತನಿಖಾ ತಂಡಕ್ಕೆ ಶಾಸಕಿ ಮಾಹಿತಿ ಸಹ ನೀಡಿದ್ದಾರೆ ಎಂದು ವರದಿಯಾಗಿದೆ. ಅಕ್ಟೋಬರ್ 26ರಂದು ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಗೆ ಕೊಲೆಯ ಬೆದರಿಕೆ ಸಹ ಬರುತ್ತಿವೆ ಎಂದಿದ್ದಾರೆ.
ಅಶ್ಲೀಲ ವಿಡಿಯೋದಲ್ಲಿ ಪಾಕಿಸ್ತಾನದ ಶಾಸಕಿ ಸಾನಿಯಾ ಇರುವುದಾಗಿ ಆರೋಪಿಸಲಾಗಿತ್ತು. ಆದರೆ ಇದನ್ನು ಶಾಸಕಿ ಖುದ್ದಾಗಿ ಅಲ್ಲಗಳೆದಿದ್ದಾರೆ. ಪ್ರಕರಣ ಕೈಗೆತ್ತಿಕೊಂಡಿರುವ ಪಂಜಾಬ್ ಪ್ರಾಂತ್ಯದ ಎಫ್ಐಎ ಅಧಿಕಾರಿಗಳು ಈಗಾಗಲೇ ಲಾಹೋರ್ ಮೂಲದ ಓರ್ವ ವ್ಯಕ್ತಿಯ ಬಂಧನ ಮಾಡಿದ್ದಾರೆ.