ETV Bharat / international

ಪಿಹೆಚ್​​ಡಿ, ಸ್ನಾತಕೋತ್ತರ ಪದವಿಗಳಿಗೆ ಯಾವುದೇ ಬೆಲೆ ಇಲ್ಲ : ತಾಲಿಬಾನ್​ ಶಿಕ್ಷಣ ಸಚಿವ - ಮುಲ್ಲಾ ಮಹಮ್ಮದ್​ ಹಸನ್

ಅಫ್ಘಾನಿಸ್ತಾನದಲ್ಲಿ ನಿನ್ನೆಯಿಂದ ತಾಲಿಬಾನ್​ ಸರ್ಕಾರ ಅಧಿಕಾರಕ್ಕೆ ಬಂದಿದೆ. ನೂತನ ಶಿಕ್ಷಣ ಸಚಿವರಾಗಿ ಆಯ್ಕೆಯಾಗಿರುವ ಶೇಖ್​​ ಮೊಲ್ವಿ ನೂರುಲ್ಲಾ ಮುನೀರ್​ ವಿವಾದಿತ ಹೇಳಿಕೆ ನೀಡಿದ್ದಾರೆ..

Taliban's Education Minister
Taliban's Education Minister
author img

By

Published : Sep 8, 2021, 3:28 PM IST

ಕಾಬೂಲ್​(ಅಫ್ಘಾನಿಸ್ತಾನ) : ಅನೇಕ ದಿನಗಳ ಸರ್ಕಸ್​ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಸಂಘಟನೆ ಹೊಸದಾಗಿ ಸರ್ಕಾರ ರಚನೆ ಮಾಡಿದೆ. ತಾಲಿಬಾನ್​​ ನಾಯಕತ್ವ ಮಂಡಳಿಯ ಮುಖ್ಯಸ್ಥ ಮುಲ್ಲಾ ಮೊಹಮ್ಮದ್​ ಹಸನ್​​​ ಅವರನ್ನ ಪ್ರಧಾನಿಯನ್ನಾಗಿ ನೇಮಕ ಮಾಡಲಾಗಿದೆ. ಉಳಿದಂತೆ ಅನೇಕ ಉಗ್ರ ನಾಯಕರಿಗೆ ವಿವಿಧ ಸಚಿವ ಸ್ಥಾನ ನೀಡಲಾಗಿದೆ.

ಶಿಕ್ಷಣ ಸಚಿವರಾಗಿ ಶೇಖ್​​ ಮೊಲ್ವಿ ನೂರುಲ್ಲಾ ಮುನೀರ್​ ಆಯ್ಕೆಯಾಗಿದ್ದು, ಇದರ ಬೆನ್ನಲ್ಲೇ ವಿವಾದಿತ ಹೇಳಿಕೆವೊಂದನ್ನ ಅವರು ನೀಡಿದ್ದಾರೆ. 'ಪಿಹೆಚ್​ಡಿ, ಸ್ನಾತಕೋತ್ತರ ಪದವಿಗಳಿಗೆ ಯಾವುದೇ ರೀತಿಯ ಬೆಲೆ(ಮೌಲ್ಯ) ಇಲ್ಲ, ಅಫ್ಘಾನಿಸ್ತಾನದಲ್ಲಿ ಅಧಿಕಾರದಲ್ಲಿರುವ ಮುಲ್ಲಾಗಳು ಮತ್ತು ತಾಲಿಬಾನ್​ಗಳು ಯಾವುದೇ ಪಿಹೆಚ್​​ಡಿ, ಎಂಎ ಅಥವಾ ಪ್ರೌಢ ಶಿಕ್ಷಣ ಪಡೆದುಕೊಂಡಿಲ್ಲ. ಆದರೂ ಅವರೂ ಎಲ್ಲರಿಗಿಂತಲೂ ಶ್ರೇಷ್ಠರು' ಎಂದು ಹೇಳಿದ್ದಾರೆ.

ಮುಲ್ಲಾಗಳು, ತಾಲಿಬಾನ್​​ಗಳು ಯಾವುದೇ ರೀತಿಯ ಶಿಕ್ಷಣ ಪಡೆದುಕೊಳ್ಳುವುದಿಲ್ಲ. ಆದರೂ ಅವರು ಎಲ್ಲರಿಗಿಂತಲೂ ಶ್ರೇಷ್ಠರಾಗಿರುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಪಿಹೆಚ್​ಡಿ, ಪದವಿ ಅಥವಾ ಸ್ನಾತಕೋತ್ತರ ಪದವಿಗಳಿಗೆ ಯಾವುದೇ ರೀತಿಯ ಬೆಲೆ ಇಲ್ಲ ಎಂದಿದ್ದಾರೆ.

ಇದನ್ನೂ ಓದಿರಿ: ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಘೋಷಿಸಿದ ತಾಲಿಬಾನ್: ಸರ್ಕಾರದಲ್ಲಿ ಅಮೆರಿಕ ಷೋಷಿತ ಉಗ್ರನಿಗೆ ಸ್ಥಾನ

ತಾಲಿಬಾನ್‌ ಸಂಘಟನೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ 'ರೆಹಬಾರಿ ಶುರಾ' ಸಮಿತಿಯ ಮುಖ್ಯಸ್ಥ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್‌ ಅಫ್ಘಾನಿಸ್ತಾನದ ಹೊಸ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿಯ ಅಧ್ಯಕ್ಷ ಮುಲ್ಲಾ ಅಬ್ದುಲ್ ಘನಿ ಬರದಾರ್ ಹಾಗೂ ಮುಲ್ಲಾ ಅಬ್ದುಸ್ ಸಲಾಂ ಅವರು ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಾರೆ.

ತಾಲಿಬಾನ್​ ಸಂಪುಟದಲ್ಲಿ ಭಾರತ ವಿರೋಧಿ ಹಕ್ಕಾನಿ ಭಯೋತ್ಪಾದಕ ಜಾಲದ ನಾಯಕರಲ್ಲೊಬ್ಬ ಹಾಗೂ ಅಮೆರಿಕದ ಮೋಸ್ಟ್ ವಾಂಟೆಡ್‌ ಉಗ್ರ ಸಿರಾಜುದ್ದೀನ್‌ ಹಕ್ಕಾನಿಗೆ ಆಂತರಿಕ ವ್ಯವಹಾರಗಳ ಸಚಿವ ಸ್ಥಾನ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.