ಹೈದರಾಬಾದ್: ಕಳೆದ ಸೋಮವಾರ ಪಾಕಿಸ್ತಾನದ ಕರಾಚಿಯಲ್ಲಿರುವ ಷೇರು ವಿನಿಮಯ ಕಚೇರಿ ಮೇಲೆ ನಡೆದ ಭಯೋತ್ಪಾದಕ ದಾಳಿ ಹಿಂದೆ ಭಾರತದ ಕೈವಾಡವಿದೆ. ಅದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಮುಂಬೈನಲ್ಲಿ ನಡೆದ ದಾಳಿಯ ರೀತಿಯಲ್ಲಿ ಕರಾಚಿ ಷೇರು ವಿನಿಮಯ ಕೇಂದ್ರದ ಮೇಲೆ ದಾಳಿ ನಡೆಸಲು ನಿರ್ಧಾರ ಮಾಡಲಾಗಿತ್ತು. ಇದರ ಹಿಂದೆ ಭಾರತದ ಕೈವಾಡವಿದೆ ಎಂಬುದು ನನಗೆ ಗೊತ್ತಿದೆ ಎಂದು ಅವರು ಹೇಳಿದ್ದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಇದೀಗ ನನ್ನ ಸಚಿವ ಸಂಪುಟ ಅಲರ್ಟ್ ಆಗಿದೆ. ಪಾಕ್ನಲ್ಲಿ ನಾಲ್ಕು ಭಯೋತ್ಪಾದಕ ದಾಳಿ ನಡೆಸಲು ನಿರ್ಧರಿಸಲಾಗಿದ್ದು, ಅದರಲ್ಲಿ ಎರಡು ಇಸ್ಲಾಮಾಬಾದ್ನಲ್ಲಿ ಎಂದು ತಿಳಿದು ಬಂದಿದೆ ಎಂದಿದ್ದಾರೆ.
ಭಯೋತ್ಪಾದಕರಿಂದ ಕರಾಚಿ ಷೇರು ವಿನಿಮಯ ಕೇಂದ್ರದ ಮೇಲೆ ದಾಳಿ: 9 ಸಾವು
ಪಾಕ್ ಸಂಸತ್ನಲ್ಲಿ ಮಾತನಾಡುತ್ತಿದ್ದ ವೇಳೆ ಈ ರೀತಿಯಾಗಿ ಹೇಳಿಕೊಂಡಿರುವ ಅವರು, ಇದಕ್ಕೆ ಸಂಬಂಧಿಸಿದಂತೆ ಮಂತ್ರಿಗಳು ಮಾಹಿತಿ ನೀಡಿದ್ದರು ಎಂದಿದ್ದಾರೆ. ಈ ದಾಳಿಯಲ್ಲಿ ನಾಲ್ವರು ಉಗ್ರರು ಸೇರಿದಂತೆ ಒಟ್ಟು 11 ಮಂದಿ ಸಾವನ್ನಪ್ಪಿದ್ದರು. ದಾಳಿ ಮಾಡಿದ ಉಗ್ರರು ಆರ್ಮಿ ವೇಷದಲ್ಲಿದ್ದರು. ಕಳೆದ ಕೆಲ ದಿನಗಳ ಹಿಂದೆ ಪಾಕ್ ಸಂಸತ್ತಿನಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್, ಅಲ್ ಖೈದಾ ಮಾಜಿ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಹುತಾತ್ಮ ಎಂದು ಕರೆದಿದ್ದರು.