ಕಠ್ಮಂಡು: ನೇಪಾಳದ ಜನಕ್ಪುರಕ್ಕೆ ತೆರಳುವ ಪ್ರಯಾಣಿಕರ ವಿಮಾನವು ಪೋಖರಾ ಬಳಿ ಭೂ ಸ್ಪರ್ಶಗೊಂಡಿದೆ. ನಿಗದಿತ ಸ್ಥಳ ತಲುಪಲು 255 ಕಿಲೋ ಮೀಟರ್ ಇರುವಾಗಲೇ ಭೂಸ್ಪರ್ಶಗೊಂಡಿದ್ದ ಪ್ರಯಾಣಿಕರು ಗೊಂದಲಕ್ಕೀಡಾದರು.
ಡಿ.18 ರಂದು ಈ ಘಟನೆ ಸಂಭವಿಸಿದ್ದು, 69 ಪ್ರಯಾಣಿಕರು ಬುದ್ಧ ಏರ್ನಿಂದ ಜನಕ್ಪುರಕ್ಕೆ ತೆರಳುತ್ತಿದ್ದರು. ಹವಾಮಾನ ವೈಪರೀತ್ಯದಿಂದ ಪೈಲಟ್‌ಗೆ ಸಂಕಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ಪೋಖರಾ ಬಳಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ ಎಂದು ಕಠ್ಮಂಡು ಪತ್ರಿಕೆ ವರದಿ ಮಾಡಿದೆ.
ಬುದ್ಧ ಏರ್ಸ್ ವಿಮಾನ U4505 ಜನಕ್ಪುರಕ್ಕೆ ತೆರಳಿದ್ದು, 3.15ರೊಳಗೆ ತಲುಪಬೇಕಿತ್ತು. ಆದರೆ ಪೋಖರಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ತಡವಾಗಿದೆ.
ಇದನ್ನು ಓದಿ: ವಿಮಾನಯಾನ ಉದ್ಯಮಿಗಳ ಜತೆ ಕೇಂದ್ರ ಸರ್ಕಾರ ಮಾತುಕತೆ
ಪ್ರಾಥಮಿಕ ವರದಿಯ ಪ್ರಕಾರ, ಹವಾಮಾನ ಸಮಸ್ಯೆಗಳಿಂದಾಗಿ, ದೃಶ್ಯ ಹಾರಾಟದ ನಿಯಮಗಳ (ವಿಎಫ್‌ಆರ್) ಅಡಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಪೋಖರಾಕ್ಕೆ ವಿಮಾನ ಹಾರಾಟ ಮಾಡಲಾಯಿತು. ವಿಎಫ್ಆರ್ ಎನ್ನುವುದು ನಿಯಮಗಳ ಒಂದು ಗುಂಪಾಗಿದ್ದು, ಪೈಲಟ್ ಹವಾಮಾನ ಪರಿಸ್ಥಿತಿಗಳನ್ನು ನೋಡಿಕೊಂಡು ವಿಮಾನವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ವಿಮಾನವು ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ನೋಡಲು ಪೈಲಟ್‌ಗೆ ಅವಕಾಶ ನೀಡುತ್ತದೆ. ಹವಾಮಾನ ವೈಪರೀತ್ಯದಿಂದ ವಿಮಾನ ವಿಳಂಬಕ್ಕೆ ಕಾರಣವಾಗಿದೆ. ಹೀಗಾಗಿ ವಿಮಾನ ಹಾರಾಟದ ಸಮಯ ಸರಿದೂಗಿಸಲು ಬುದ್ಧ ಏರ್ ಅಧಿಕಾರಿಗಳು ಮೊದಲು ಪೋಖರಾದಲ್ಲಿ ತುರ್ತು ಭೂಸ್ಪರ್ಶ ಮಾಡಲು ನಿರ್ಧರಿಸಿದ್ದಾರೆ" ಎಂದು ವಿಮಾನಯಾನ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.