ಕಠ್ಮಂಡು: ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಇಂದು 5ನೇ ಬಾರಿಗೆ ನೇಪಾಳದ ಪ್ರಧಾನಿಯಾಗಿ ಆಯ್ಕೆಯಾದರು. ದೇಶದ ಅಧ್ಯಕ್ಷೆ ಬಿದ್ಯಾದೇವಿ ಭಂಡಾರಿ ಅವರು ಸಂವಿಧಾನದ 76 (5) ನೇ ವಿಧಿಗೆ ಅನುಗುಣವಾಗಿ ಹೊಸ ಪ್ರಧಾನಿಯನ್ನು ನೇಮಕ ಮಾಡಿದ್ದಾರೆ.
74 ವರ್ಷದ ಬಹದ್ದೂರ್ ನೇಪಾಳ ಪ್ರಧಾನಿಯಾಗಿ ಅಧಿಕಾರಕ್ಕೆ ಮರಳುತ್ತಿರುವುದು ಇದು ಐದನೇ ಬಾರಿ. ಆಡಳಿತ ಪಕ್ಷದಲ್ಲಿ ಉಂಟಾಗಿದ್ದ ವಿರೋಧಿ ಅಲೆಯಿಂದಾಗಿ ಕೆ.ಪಿ ಒಲಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಒಲಿ ಅವರ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸುವಂತೆ ಅಲ್ಲಿನ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಈ ಹಿಂದೆ ಶೇರ್ ಬಹದ್ದೂರ್ ಅವರು 1995ರ ಸೆಪ್ಟೆಂಬರ್‌ನಿಂದ 1997ರ ಮಾರ್ಚ್, 2001ರ ಜುಲೈನಿಂದ 2002ರ ಅಕ್ಟೋರಬರ್‌ವರೆಗೆ, 2004ರ ಜೂನ್‌ನಿಂದ 2005ರ ಫೆಬ್ರವರಿ ಹಾಗೂ 2017ರ ಜೂನ್‌ನಿಂದ 2018ರ ಫೆಬ್ರವರಿ ವರೆಗೆ 4 ಬಾರಿ ನೇಪಾಳದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.