ETV Bharat / international

ಯಾವುದೇ ತೀರ್ಮಾನವಿಲ್ಲದೆ ಕೊನೆಗೊಂಡ ಒಲಿ-ಪ್ರಚಂಡ ಮಾತುಕತೆ..

ಆಡಳಿತಾರೂಢ ಎನ್‌ಸಿಪಿಯಲ್ಲಿನ ಆಂತರಿಕ ವಿವಾದಗಳ ಮಧ್ಯೆ, ಒಲಿ ಮತ್ತು ಪ್ರಚಂಡ ಇಬ್ಬರೂ ಸಹ-ಅಧ್ಯಕ್ಷರು, ನಡೆಯುತ್ತಿರುವ ಸಂಸತ್ತಿನ ಅಧಿವೇಶನದ ಅವಧಿ ಮುಗಿದಾಗಿನಿಂದ ಸಭೆಗಳನ್ನು ನಡೆಸುವ ಮೂಲಕ ಭಿನ್ನಾಭಿಪ್ರಾಯವನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ..

ಒಲಿ-ಪ್ರಚಂಡ ಮಾತುಕತೆ
ಒಲಿ-ಪ್ರಚಂಡ ಮಾತುಕತೆ
author img

By

Published : Jul 5, 2020, 6:26 PM IST

ಕಠ್ಮಂಡು (ನೇಪಾಳ) : ಪ್ರಧಾನಿ ಕೆ ಪಿ ಶರ್ಮಾ ಒಲಿ ಮತ್ತು ನೇಪಾಳ ಕಮ್ಯುನಿಸ್ಟ್ ಪಕ್ಷದ (ಎನ್‌ಸಿಪಿ) ಉಪಾಧ್ಯಕ್ಷ ಪುಷ್ಪಾ ಕಮಲ್ ದಹಲ್ ಪ್ರಚಂಡ ನಡುವೆ ನಡೆದ ಸಭೆ ಯಾವುದೇ ತೀರ್ಮಾನವಿಲ್ಲದೆ ಕೊನೆಗೊಂಡಿತು.

ಮುಂದಿನ ಸುತ್ತಿನ ಮಾತುಕತೆಯನ್ನು ಸೋಮವಾರ ಬೆಳಗ್ಗೆ ನಡೆಸಲು ನಾಯಕರು ನಿರ್ಧರಿಸಿದ್ದಾರೆ ಎಂದು ದಿ ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ. ಶೀತಲ್ ನಿವಾಸ್‌ದಲ್ಲಿ ಅಧ್ಯಕ್ಷ ಬಿಧ್ಯಾ ದೇವಿ ಭಂಡಾರಿ ಅವರೊಂದಿಗಿನ ಸಭೆ ನಂತರ, ಪ್ರಚಂಡ ಅವರು ಇಂದು ಆಡಳಿತ ಪಕ್ಷದ ಉನ್ನತ ನಾಯಕರ ನಡುವಿನ ಬಿರುಕುಗಳನ್ನು ಸರಿಪಡಿಸಲು ಹೆಚ್ಚಿನ ಮಾತುಕತೆ ನಡೆಸಲು ಒಲಿಯ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದರು.

ಆಡಳಿತಾರೂಢ ಎನ್‌ಸಿಪಿಯಲ್ಲಿನ ಆಂತರಿಕ ವಿವಾದಗಳ ಮಧ್ಯೆ, ಒಲಿ ಮತ್ತು ಪ್ರಚಂಡ ಇಬ್ಬರೂ ಸಹ-ಅಧ್ಯಕ್ಷರು, ನಡೆಯುತ್ತಿರುವ ಸಂಸತ್ತಿನ ಅಧಿವೇಶನದ ಅವಧಿ ಮುಗಿದಾಗಿನಿಂದ ಸಭೆಗಳನ್ನು ನಡೆಸುವ ಮೂಲಕ ಭಿನ್ನಾಭಿಪ್ರಾಯವನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ.

ಜೂನ್ 30 ರಂದು ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಒಲಿ ತೀವ್ರ ಟೀಕೆಗಳನ್ನು ಎದುರಿಸಿದ್ದು, ಹೆಚ್ಚಿನ ಸದಸ್ಯರು ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಸರ್ಕಾರವು ಹಲವಾರು ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ಪ್ರಧಾನಮಂತ್ರಿ ಪಕ್ಷದ ಒಳಗೆ ಮತ್ತು ಹೊರಗೆ ಟೀಕೆಗೆ ಗುರಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.