ETV Bharat / international

ನೇಪಾಳದಲ್ಲಿ ಹದಗೆಟ್ಟ ರಾಜಕೀಯ.. ಸರ್ಕಾರದ ವಿರುದ್ಧ ದಂಗೆದ್ದ ಜನ! - ಕಠ್ಮಂಡು ಪ್ರತಿಭಟನೆ,

ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿದೆ. ಕೆಲವು ದಿನಗಳ ಹಿಂದೆ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ನಿರ್ಧಾರವನ್ನು ಖಂಡಿಸಿ ದೇಶದ್ಯಾದಂತ ಪ್ರತಿಭಟಿಸಲಾಗಿತ್ತು. ಈಗ ಮತ್ತೆ ಸರ್ಕಾರದ ವಿರುದ್ಧ ಅಲ್ಲಿನ ಜನ ದಂಗೆ ಎದ್ದಿದ್ದಾರೆ.

People held demonstration, People held demonstration in Kathmandu, Kathmandu protest, Kathmandu protest news, Kathmandu protest latest news, ಕಠ್ಮಂಡುವಿನಲ್ಲಿ ಬಹಿರಂಗ ಹೋರಾಟ, ಕಠ್ಮಂಡುವಿನಲ್ಲಿ ಸರ್ಕಾರದ ವಿರುದ್ಧ ಬಹಿರಂಗ ಹೋರಾಟ, ಕಠ್ಮಂಡು ಪ್ರತಿಭಟನೆ, ಕಠ್ಮಂಡು ಪ್ರತಿಭಟನೆ ಸುದ್ದಿ,
ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ಜನ
author img

By

Published : Jan 2, 2021, 7:10 AM IST

ಕಠ್ಮಂಡು: ಹಿಮಾಲಯನ್ ರಾಷ್ಟ್ರದ ರಾಜಕೀಯ ಬಿಕ್ಕಟ್ಟು ಮತ್ತಷ್ಟು ದುರ್ಬಲಗೊಳ್ಳುತ್ತಿದೆ. ನೇಪಾಳದ ಸ್ಥಾನಮಾನವನ್ನು ಸಾಂವಿಧಾನಿಕ ರಾಜಪ್ರಭುತ್ವವಾಗಿ ಪುನಃ ಸ್ಥಾಪಿಸಬೇಕೆಂದು ಒತ್ತಾಯಿಸಿ ಸಾವಿರಾರು ರಾಜಪ್ರಭುತ್ವ ಪರ ಪ್ರತಿಭಟನಾಕಾರರು ಶುಕ್ರವಾರ ಕಠ್ಮಂಡುವಿನಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಪ್ರಜಾತಂತ್ರ ಪಕ್ಷವು ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಪ್ರತಿಭಟಿಸಿ ಸರ್ಕಾರದ ವಿರೋಧ ಘೋಷಣೆಗಳನ್ನು ಕೂಗಿದರು. ಅಧಿಕಾರದಲ್ಲಿರುವ ರಾಜಕಾರಣಿಗಳು ಪ್ರಸ್ತುತ ಕಾಲದಲ್ಲಿ ಜನರ ಅಗತ್ಯವನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ. ಈಗಿರುವ ರಾಜಕೀಯ ವ್ಯವಸ್ಥೆಯನ್ನು ರದ್ದುಗೊಳಿಸಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಪರಿಹರಿಸುವ ಏಕೈಕ ಮಾರ್ಗ ಎಂದರೆ ರಾಜಪ್ರಭುತ್ವದ ಮರು ಸ್ಥಾಪನೆ ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದ್ದಾರೆ.

ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ಜನ

ಈ ರಾಷ್ಟ್ರದಲ್ಲಿ ಕಮ್ಯುನಿಸ್ಟ್ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಫೆಡರಲ್ ರಚನೆಯ ಹೊರತಾಗಿಯೂ ಈ ಸರ್ಕಾರವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ದೇಶವು ಬಿಕ್ಕಟ್ಟಿನಲ್ಲಿದೆ. ರಾಷ್ಟ್ರವನ್ನು ಉಳಿಸುವ ಸಲುವಾಗಿ, ನಾವು ಹಿಂದೂ - ರಾಜ್ಯ ಮತ್ತು ರಾಜಪ್ರಭುತ್ವದ ಮರುಸ್ಥಾಪನೆಗಾಗಿ ಒತ್ತಾಯಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರ ಗೊಂಬಾ ಘೇಲ್ ಮಾಧ್ಯಮಕ್ಕೆ ತಿಳಿಸಿದರು.

ಸಂಸತ್ತನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆಗಳನ್ನು ಘೋಷಿಸುವ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ನಿರ್ಧಾರವನ್ನು ಖಂಡಿಸಿ, ರಾಜಧಾನಿ ಕಠ್ಮಂಡುವಿನಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಈ ಹಿಂದೆ ಒಲಿ ನಿರ್ಧಾರವನ್ನು ಖಂಡಿಸಿ ಸಾವಿರಾರು ಜನ ನಾಗರಿಕರು ಕಠ್ಮಂಡುವಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಈ ಕೂಡಲೇ ಸಂಸತ್ತು ವಿಸರ್ಜಿಸುವ ತಮ್ಮ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದರು.

ಉಸ್ತುವಾರಿ ಸರ್ಕಾರದ ಪ್ರಧಾನ ಮಂತ್ರಿ ಕೆ.ಪಿ.ಶರ್ಮಾ ಒಲಿ ಅವರು ಇತ್ತೀಚೆಗೆ ಸ್ಥಳೀಯ ಟೆಲಿವಿಷನ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಸಂವಿಧಾನದ ಪ್ರಕಾರ ನ್ಯಾಯಾಲಯವು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.