ಸಿಯೋಲ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪ್ಯೊಂಗ್ಯಾಂಗ್ನ ಪೂರ್ವ ಕರಾವಳಿ ತೀರದಲ್ಲಿ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ
ಸ್ಫೋಟಕಗಳನ್ನು ಗುರಿಯಾಗಿಸಿ ಹೊಡೆದುರುಳಿಸುವ ಹೊಸ ಮಾದರಿಯ ಕ್ಷಿಪಣಿ ಇದಾಗಿದೆ. ಕೊರಿಯನ್ ಪರ್ಯಾಯ ದ್ವೀಪ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ರೀತಿಯ ಮಿಲಿಟರಿ ಬೆದರಿಕೆಗಳನ್ನು ತಡೆಯುವಲ್ಲಿ ಹಾಗೂ ದೇಶದ ಮಿಲಿಟರಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ ಎಂದು ಕ್ಷಿಪಣಿ ಪರೀಕ್ಷೆಯ ನೇತೃತ್ವ ವಹಿಸಿದ್ದ ಉನ್ನತ ಅಧಿಕಾರಿ ರಿ ಪ್ಯೊಂಗ್ ಚೋಲ್ ಹೇಳಿದ್ದಾರೆ.
ಇದನ್ನೂ ಓದಿ: ಅಫ್ಘಾನ್ನಿಂದ ಅಮೆರಿಕ ಸೈನ್ಯ ಹಿಂಪಡೆಯುವ ನೀತಿ ತಿರಸ್ಕರಿಸಿದ ಬೈಡನ್
ಪರಮಾಣು ಕಾರ್ಯಕ್ರಮದ ಮಾತುಕತೆ ನಡುವೆ ಪ್ಯೊಂಗ್ಯಾಂಗ್ನಲ್ಲಿ ಉದ್ವಿಗ್ನತೆ ಹೆಚ್ಚಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ನಾವು ಸಮಾಲೋಚನೆ ನಡೆಸುತ್ತಿದ್ದೇಚೆ. ಪರಿಸ್ಥತಿ ಉಲ್ಭಣಗೊಳಿಸಲು ಯತ್ನಿಸಿದರೆ ಅದಕ್ಕೆ ನಮ್ಮಿಂದ ತಕ್ಕ ಪ್ರತಿಕ್ರಿಯೆಯೂ ಇರುತ್ತದೆ ಎಂದು ನಿನ್ನೆಯಷ್ಟೇ ಬೈಡನ್ ಹೇಳಿದ್ದರು.
ಅಮೆರಿಕದ ವಿರುದ್ಧ ಹೋರಾಟಕ್ಕೆ ಸದಾ ಸಿದ್ಧವಾಗಿರಲು ತಮ್ಮ ದೇಶದ ಮಿಲಿಟರಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದಾಗಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಈ ಹಿಂದೆ ಹೇಳಿಕೆ ನೀಡಿದ್ದರು.