ETV Bharat / international

ಅಫ್ಘಾನ್‌ ಬಿಕ್ಕಟ್ಟು ; ಅಮೆರಿಕದ ಏಜೆನ್ಸಿಯಿಂದ ತರಬೇತಿ ಪಡೆದಿದ್ದ 20 ಸಾವಿರ ಕಮಾಂಡೋಗಳ ಏರ್‌ಲಿಫ್ಟ್‌ - ಅಮೆರಿಕ

ಅಫ್ಘಾನ್‌ ಅನ್ನು ತಾಲಿಬಾನ್‌ ವಶಕ್ಕೆ ಪಡೆದ ಬಳಿಕ ಅಲ್ಲಿದ್ದ ವಿದೇಶಿಗರು, ಕೆಲ ಸ್ಥಳೀಯರನ್ನು ಏರ್‌ಲಿಫ್ಟ್‌ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅಮೆರಿಕದ ಸೆಂಟ್ರಲ್‌ ಇಂಟೆಲಿಜೆನ್ಸ್ ಏಜೆನ್ಸಿಯಿಂದ ತರಬೇತಿ ಪಡೆದಿದ್ದ ಸುಮಾರು 20 ಸಾವಿರ ಅಫ್ಘಾನ್‌ ವಿಶೇಷ ಭದ್ರತಾ ಕಮಾಂಡೋಗಳನ್ನೂ ಸ್ಥಳಾಂತರ ಮಾಡಲಾಗಿದೆ..

Most of 20,000 CIA-trained Afghan fighters make it to US
ಅಫ್ಘಾನ್‌ ಬಿಕ್ಕಟ್ಟು; ಅಮೆರಿಕದ ಏಜೆನ್ಸಿಯಿಂದ ತರಬೇತಿ ಪಡೆದಿದ್ದ 20 ಸಾವಿರ ಅಫ್ಘಾನ್‌ ಕಮಾಂಡೋಗಳು ಏರ್‌ಲಿಫ್ಟ್‌
author img

By

Published : Sep 13, 2021, 9:57 PM IST

ನವದೆಹಲಿ : ನ್ಯಾಟೋ ಪಡೆಗಳನ್ನು ಹಿಂಪಡೆದ ಬಳಿಕ ಅಫ್ಘಾನಿಸ್ತಾನವನ್ನು ತಾಲಿಬಾನ್‌ ಸಂಪೂರ್ಣವಾಗಿ ವಶಪಡಿಸಿಕೊಂಡು ಇದೀಗ ಸರ್ಕಾರವನ್ನು ರಚಿಸಿ ಆಡಳಿತಕ್ಕೆ ಮುಂದಾಗಿದೆ. ಆದರೆ, ಅಫ್ಘಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಲಕ್ಷಾಂತರ ಮಂದಿ ಜನರಲ್ಲಿ ಅಮೆರಿಕದ ಸೆಂಟ್ರಲ್‌ ಇಂಟೆಲಿಜೆನ್ಸ್ ಏಜೆನ್ಸಿಯಿಂದ ತರಬೇತಿ ಪಡೆದಿದ್ದ ಅಫ್ಘಾನ್‌ ಕಮಾಂಡೋಗಳು ಸೇರಿದ್ದಾರೆ ಎಂಬ ಅಚ್ಚರಿಯ ಮಾಹಿತಿ ಈಟಿವಿ ಭಾರತಕ್ಕೆ ಲಭ್ಯವಾಗಿದೆ. ಅಮೆರಿಕಗೆ ಬೆಂಬಲ ನೀಡಿದ್ದಾರೆ ಎಂಬ ಕಾರಣಕ್ಕೆ ತಾಲಿಬಾನ್‌ಗಳು ವಿಶೇಷವಾಗಿ ಈ ಪಡೆಗಳನ್ನು ಬೇಟೆಯಾಡುತ್ತಿದ್ದರು.

ಹೀಗೆ ಸ್ಥಳಾಂತರವಾಗಿರುವವರ ಪೈಕಿ ಸುಮಾರು 20,000 ಸೈನಿಕರು ಅಮೆರಿಕ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಸಿಐಎನಿಂದ ಬೆಳೆದ, ತರಬೇತಿ ಪಡೆದ ಸುಮಾರು ಶೇ.90ರಷ್ಟು ಅಫ್ಘಾನ್‌ ವಿಶೇಷ ಪಡೆಗಳ ಕಮಾಂಡೋಗಳನ್ನು ಕತಾರ್ ಮೂಲಕ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಯುಎಸ್‌ ತಲುಪಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಕಾಲೂಬ್‌ನಲ್ಲಿರುವ ಅಫ್ಘಾನ್‌ ಗುಪ್ತಚರ ಮೂಲಗಳು ತಿಳಿಸಿವೆ.

ಕಾಬೂಲ್‌ನಲ್ಲಿ ಈಗಾಗಲೇ 33 ಸದಸ್ಯರ ಮಧ್ಯಂತರ ಸರ್ಕಾರವನ್ನು ಸ್ಥಾಪಿಸಿರುವ ತಾಲಿಬಾನ್‌ಗಳು, ಪ್ರತೀಕಾರದ ಭಯದಿಂದ 30 ಪಶ್ತೂನ್, ಎರಡು ತಾಜಿಕ್ ಮತ್ತು ಒಂದು ಉಜ್ಬೇಕ್ ಆದರೆ, ಶಿಯಾಗಳು, ಹಜಾರರು, ಬಲೂಚ್, ತುರ್ಕಮೆನ್, ಮಹಿಳೆಯರು ಅಥವಾ ಮುಸ್ಲಿಮೇತರರು ಇಲ್ಲ.

ನುರಿತ ಹೋರಾಟಗಾರರು, ಸುಲಭವಾಗಿ ನಿಯೋಜಿಸಬಹುದಾದ ಸೇನೆಯಲ್ಲದವರು ಪಂಜಶೀರ್‌ಗೆ ರಾಷ್ಟ್ರೀಯ ಪ್ರತಿರೋಧ ಪಡೆ (ಎನ್‌ಆರ್‌ಎಫ್‌) ನೇತೃತ್ವದಲ್ಲಿ ತಾಲಿಬಾನ್‌ಗಳ ವಿರುದ್ಧ ಹೋರಾಟಕ್ಕೆ ನೆರವಾಗಬಹುದು. ಈ ವಿಶೇಷ ಹೋರಾಟಗಾರರ ಗುಂಪು ಅಶ್ರಫ್ ಘನಿ ನೇತೃತ್ವದ ಸರ್ಕಾರದ ಅಫ್ಘಾನ್ ರಾಷ್ಟ್ರೀಯ ಭದ್ರತಾ ಪಡೆಗಳ (ಎಎನ್‌ಎಸ್‌ಎಫ್‌) ಕಾರ್ಯಾಚರಣೆಗಳನ್ನು ಮುನ್ನಡೆಸಿತ್ತು. ಆ ಮೂಲಕ ಸಾಮಾನ್ಯ ಎಎನ್‌ಎಸ್‌ಎಫ್‌ ಪಡೆಗಳು ಬಾಹ್ಯ ಬೆಂಬಲ ನೀಡಿದ್ದ ವಿಚಾರ ಬಹಿರಂಗವಾಗಿರುವ ರಹಸ್ಯವಾಗಿದೆ.

ಇದನ್ನೂ ಓದಿ: ನಾನು ಸತ್ತಿಲ್ಲ, ಬದುಕಿದ್ದೇನೆ, ತಾಲಿಬಾನ್​ ಸಹ ಸಂಸ್ಥಾಪಕನ ಆಡಿಯೋ ಕ್ಲಿಪ್ ರಿಲೀಸ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.