ನೇಪಾಳ/ ನವದೆಹಲಿ: ಭಾರತ, ನೇಪಾಳ ಜಂಟಿಯಾಗಿ ಕೆಲ ಯೋಜನೆಗಳನ್ನು ಜಾರಿ ತರಲು ಮುಂದಾಗಿದ್ದು, ಇದರ ಭಾಗವಾಗಿ ಇಂದು ಎರಡು ದೇಶಗಳ ಗಡಿಭಾಗವಾದ ಜೋಗ್ಬಾನಿ-ಬಿರತ್ನಗರ್ನಲ್ಲಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ICP) ಅನ್ನು ಪಿಎಂ ನರೇಂದ್ರ ಮೋದಿ ಹಾಗೂ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಉದ್ಘಾಟಿಸಿದ್ದಾರೆ.
ಭಾರತದ ನೆರವಿನಿಂದಾಗಿ 260 ಎಕರೆ ಜಾಗದಲ್ಲಿ, 140 ಕೋಟಿ ವೆಚ್ಚದಲ್ಲಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಅನ್ನು ಕಟ್ಟಲಾಗಿದ್ದು, ಇದು ಪ್ರತಿನಿತ್ಯ 500 ಟ್ರಕ್ಗಳ ಸಂಚಾರ ಸಾಮರ್ಥ್ಯ ಹೊಂದಿದೆ. ಎರಡು ದೇಶಗಳ ನಡುವಿನ ವ್ಯಾಪಾರ ಹಾಗೂ ಜನರ ಸಂಪರ್ಕವನ್ನು ಹೆಚ್ಚಿಸಲಿರುವ ಈ ಯೋಜನೆಯನ್ನು ಎರಡೂ ರಾಷ್ಟ್ರಗಳ ಪ್ರಧಾನಿಗಳು ವಿಡಿಯೋ ಲಿಂಕ್ ಮೂಲಕ ಚಾಲನೆ ನೀಡಿದ್ದಾರೆ.
-
PM Modi: India and Nepal are working on several cross-border connectivity projects such as road, rail, and transmission lines. Integrated check posts at major border points between our countries are greatly facilitating mutual trade and movement. pic.twitter.com/Y0yhpmvmtr
— ANI (@ANI) January 21, 2020 " class="align-text-top noRightClick twitterSection" data="
">PM Modi: India and Nepal are working on several cross-border connectivity projects such as road, rail, and transmission lines. Integrated check posts at major border points between our countries are greatly facilitating mutual trade and movement. pic.twitter.com/Y0yhpmvmtr
— ANI (@ANI) January 21, 2020PM Modi: India and Nepal are working on several cross-border connectivity projects such as road, rail, and transmission lines. Integrated check posts at major border points between our countries are greatly facilitating mutual trade and movement. pic.twitter.com/Y0yhpmvmtr
— ANI (@ANI) January 21, 2020
ಉದ್ಘಾಟನೆ ಬಳಿಕ ಮಾತನಾಡಿರುವ ಪಿಎಂ ಮೋದಿ, ಭಾರತ ಮತ್ತು ನೇಪಾಳ ರಸ್ತೆ, ರೈಲು, ಪ್ರಸರಣ ಮಾರ್ಗಗಳಂತಹ ಹಲವಾರು ಗಡಿಯಾಚೆಗಿನ ಸಂಪರ್ಕ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಚೆಕ್ ಪೋಸ್ಟ್ ಎರಡು ದೇಶಗಳ ನಡುವಿನ ವ್ಯಾಪಾರ-ವಹಿವಾಟಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಉಭಯ ದೇಶಗಳ ಮಾತುಕತೆಯಿಂದ ಬಾಕಿ ವಿಷಯಗಳನ್ನು ಬಗೆಹರಿಸುವ ಸಮಯ ಬಂದಿದ್ದು, ಇನ್ನುಮುಂದೆ ನಮ್ಮ ಸರ್ಕಾರ ಭಾರತದೊಂದಿಗೆ ಸೇರಿ ಕೆಲಸ ಮಾಡಲಿದೆ ಎಂದು ನೇಪಾಳ ಪ್ರಧಾನಿ ಓಲಿ ತಿಳಿಸಿದರು.
-
Nepal PM KP Sharma Oli: The time has come to resolve all pending issues through dialogue in the lasting interest of our two countries. Stable&majority government in both countries is an opportune moment. My govt remains committed to working closely with govt of India towards this https://t.co/qcLCNgoJOZ pic.twitter.com/LPLk3MMgfj
— ANI (@ANI) January 21, 2020 " class="align-text-top noRightClick twitterSection" data="
">Nepal PM KP Sharma Oli: The time has come to resolve all pending issues through dialogue in the lasting interest of our two countries. Stable&majority government in both countries is an opportune moment. My govt remains committed to working closely with govt of India towards this https://t.co/qcLCNgoJOZ pic.twitter.com/LPLk3MMgfj
— ANI (@ANI) January 21, 2020Nepal PM KP Sharma Oli: The time has come to resolve all pending issues through dialogue in the lasting interest of our two countries. Stable&majority government in both countries is an opportune moment. My govt remains committed to working closely with govt of India towards this https://t.co/qcLCNgoJOZ pic.twitter.com/LPLk3MMgfj
— ANI (@ANI) January 21, 2020
ಭಾರತ ಮತ್ತು ನೇಪಾಳ ಸೇರಿ ನಿರ್ಮಿಸಿರುವ ಎರಡನೇ ICP ಇದಾಗಿದ್ದು, ಈ ಹಿಂದೆ 2018 ರಲ್ಲಿ ರಕ್ಸೌಲ್-ಬಿರ್ಗುಂಜ್ನಲ್ಲಿ ಮೊದಲ ICP ಕಟ್ಟಲಾಗಿತ್ತು.