ಲಾಹೋರ್ : ಪಂಜಾಬ್ ರಾಜಧಾನಿಯ ಕೋಟ್ ಲಖ್ಪತ್ ಜೈಲಿನಲ್ಲಿದ್ದ ಸಂದರ್ಭದಲ್ಲಿ ಅಲ್ಲಿದ್ದ ಸರ್ಕಾರವು "ಇಲಿಯಿಂದ ತಯಾರಿಸಿದ ಆಹಾರ"ವನ್ನು ಸೇವಿಸುವಂತೆ ಒತ್ತಾಯಿಸಿತ್ತು ಎಂದು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಪಕ್ಷದ ಉಪಾಧ್ಯಕ್ಷೆ ಮರಿಯಮ್ ನವಾಜ್ ಆರೋಪಿಸಿದ್ದಾರೆ.
ಜಿಯೋ ನ್ಯೂಸ್ ಪ್ರಕಾರ, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರಿಯಮ್ ಪತ್ರಕರ್ತರೊಂದಿಗಿನ ಅನೌಪಚಾರಿಕ ಸಂಭಾಷಣೆಯಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಜೈಲಿನಲ್ಲಿದ್ದಾಗ ಅವರು ನೀಡುತ್ತಿದ್ದ ವಸ್ತುಗಳು ಬಳಕೆಗೆ ಯೋಗ್ಯವಾಗಿರಲಿಲ್ಲ ಎಂದರು. "ಜೈಲಿನಲ್ಲಿದ್ದಾಗ ಬೂಸ್ಟ್ ಹಿಡಿದ ಔಷಧಿಗಳನ್ನು ನೀಡುತ್ತಿದ್ದರು. ಅವುಗಳನ್ನು ತಿನ್ನುವಂತೆ ಒತ್ತಾಯಿಸುತ್ತಿದ್ದರು. ಅಷ್ಟೇ ಅಲ್ಲ, ನನ್ನ ಬಾತ್ರೂಮ್ ಮತ್ತು ಕೋಣೆಯಲ್ಲಿ ಕ್ಯಾಮೆರಾ ಅಳವಡಿಸಿದ್ದರು ಎಂದು ಆರೋಪಿಸಿದ್ದಾರೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಮರಿಯಮ್ ನವಾಜ್ ಅವರನ್ನು ಲಾಹೋರ್‌ನಲ್ಲಿ ಬಂಧಿಸಲಾಗಿದೆ. ಮರಿಯಮ್ ನವೆಂಬರ್ ತಿಂಗಳ ಆರಂಭದಲ್ಲಿ,"ನಾನು ಎರಡು ಬಾರಿ ಜೈಲಿಗೆ ಹೋಗಿದ್ದೇನೆ. ಅಲ್ಲಿನ ಸಿಬ್ಬಂದಿ ಒಬ್ಬ ಮಹಿಳೆಯನ್ನು ಉಪಚರಿಸಿದ ರೀತಿ ನಾನು ಬಹಿರಂಗಪಡಿಸಿದ್ರೆ, ಅವರ ಮುಖವನ್ನು ತೋರಿಸಲು ಧೈರ್ಯವಿರುವುದಿಲ್ಲ" ಎಂದು ಸರ್ಕಾರವನ್ನು ಉಲ್ಲೇಖಿಸಿ ಹೇಳಿದ್ದರು.
ಜೈಲಿನಲ್ಲಿದ್ದಾಗ 'ಇಲಿಯಿಂದ ತಯಾರಿಸಿದ ಕಲುಷಿತ ಆಹಾರವನ್ನು' ಸೇವಿಸುವಂತೆ ಒತ್ತಾಯಿಸಿದ್ದಾರೆ ಎಂದು ಮರಿಯಮ್ ನೀಡಿದ ಹೇಳಿಕೆಯನ್ನು ಅಕೌಂಟೆಬಿಲಿಟಿ ಮತ್ತು ಆಂತರಿಕ ಸಂಬಂಧಿತ ಪ್ರಧಾನ ಮಂತ್ರಿಯ ಸಲಹೆಗಾರ ನ್ಯಾಯವಾದಿ ಮಿರ್ಜಾ ಶಹಜಾದ್ ಅಕ್ಬರ್ ನಿರಾಕರಿಸಿದ್ದಾರೆ. "ಮರಿಯಮ್ ತಿನ್ನುವ ಆಹಾರವು ಯಾವಾಗಲೂ ಮನೆಯಿಂದಲೇ ಬರುತ್ತಿತ್ತು. ಹಾಗಾಗಿ ಅವರು ತಂದ ಊಟದಲ್ಲೇ ಅವರ ಮನೆಯ ಇಲಿ ಇತ್ತು ಎನ್ನಬಹುದು" ಎಂದು ಹೇಳಿದ್ದಾರೆ.
ಇನ್ನು, ಕಳೆದ ವಾರ ನಿಧನರಾದ ಮರಿಯಮ್ ಅಜ್ಜಿ ಬೇಗಂ ಶಮೀಮ್ ಅಖ್ತರ್ ಬಗ್ಗೆ ಮಾತನಾಡಿದ ಅವರು, "ಆಕೆ ಸಾಯುವ ಎರಡು-ಮೂರು ದಿನಗಳ ಮೊದಲು ವಿಡಿಯೋ ಕರೆಯ ಮೂಲಕ ಮಾತನಾಡಿದ್ದಾಳೆ. ಜೈಲಿನಿಂದ ಬಿಡುಗಡೆಯಾಗಿದ್ದೀಯಾ ಎಂದು ಅವಳು ಕೇಳುತ್ತಿದ್ದಳು. ಯಾಕೆಂದರೆ, ನಾನು ಇನ್ನೂ ಜೈಲಿನಲ್ಲಿದ್ದೇನೆ ಎಂದು ಆಕೆ ಭಾವಿಸಿದ್ದಳು. ಅಜ್ಜಿ ನನ್ನ ತಂದೆ ಮತ್ತು ಶಹಬಾಜ್ ಷರೀಫ್ ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಆಕೆಯ ಅಗಲಿಕೆ ಷರೀಫ್ ಕುಟುಂಬಕ್ಕೆ ದೊಡ್ಡ ಆಘಾತ" ಎಂದು ಹೇಳಿದರು.
"ನನ್ನ ಮಗ ಜುನೈದ್ ಸಫ್ದಾರ್ ಅಜ್ಜಿಯ ಸಾವಿನ ಬಗ್ಗೆ ತಿಳಿಸಲು ಲಾಹೋರ್‌ನಿಂದ ಪೇಶಾವರಕ್ಕೆ ಬಂದಿದ್ದ. ಆದರೆ, ನನ್ನ ಭೇಟಿಗೆ ಅವಕಾಶ ಕೊಟ್ಟಿಲ್ಲ. ನನ್ನ ತಂದೆ ಮತ್ತು ಕುಟುಂಬ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಲೇ ಇತ್ತು" ಎಂದು ಟ್ವಿಟರ್ನಲ್ಲಿ ಪಿಟಿಐ ಸರ್ಕಾರದ ಅಜಾಗರೂಕ ಮತ್ತು ಅಮಾನವೀಯ ಧೋರಣೆ ಬಗ್ಗೆ ಆರೋಪಿಸಿದ್ದಾರೆ.