ETV Bharat / international

ಶ್ರೀಲಂಕಾದ ನೂತನ ಪ್ರಧಾನಿಯಾಗಿ ಮಹಿಂದ​​ ರಾಜಪಕ್ಸೆ ಪ್ರಮಾಣವಚನ

ಶ್ರೀಲಂಕಾ ಸಂಸತ್​ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಮಹಿಂದ​​ ರಾಜಪಕ್ಸೆ ದೇಶದ ನೂತನ ಪ್ರಧಾನಿಯಾಗಿ ಇಂದು ಅಧಿಕಾರ ಸ್ವೀಕರಿಸಿದರು.

Mahinda Rajapaksa takes oath as Sri Lankan Prime Minister
ಮಹಿಂದ​​ ರಾಜಪಕ್ಸೆ
author img

By

Published : Aug 9, 2020, 1:44 PM IST

ಕೊಲೊಂಬೋ: ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದ​​ ರಾಜಪಕ್ಸೆ ದೇಶದ ನೂತನ ಪ್ರಧಾನಿಯಾಗಿ ಇಂದು ಅಧಿಕಾರ ಸ್ವೀಕರಿಸಿದರು. ಐತಿಹಾಸಿಕ ಬೌದ್ಧ ದೇವಾಲಯವೊಂದರಲ್ಲಿ ಮಹಿಂದ ಅವರ ಸಹೋದರ ಹಾಗೂ ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಪ್ರಮಾಣವಚನ ಬೋಧಿಸಿದರು.

ಶ್ರೀಲಂಕಾದ ನೂತನ ಪ್ರಧಾನಿಯಾಗಿ ಮಹಿಂದ​​ ರಾಜಪಕ್ಸೆ ಅಧಿಕಾರ ಸ್ವೀಕಾರ

ಆಗಸ್ಟ್ 5 ರಂದು ನಡೆದ ಸಂಸತ್​ ಚುನಾವಣೆಯಲ್ಲಿ ಮಹಿಂದ​​ ರಾಜಪಕ್ಸೆ ನೇತೃತ್ವದ ಶ್ರೀಲಂಕಾ ಪೀಪಲ್ಸ್ ಪಾರ್ಟಿ (ಎಸ್‌ಎಲ್‌ಪಿಪಿ) ಮೂರನೇ ಎರಡರಷ್ಟು ಬಹುಮತ ಗಳಿಸಿ ಭರ್ಜರಿ ಗೆಲುವು ಸಾಧಿಸಿದೆ. ಮಹಿಂದ​​ ರಾಜಪಕ್ಸೆ ಬರೋಬ್ಬರಿ 5 ಲಕ್ಷ ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಇದು ಚುನಾವಣಾ ಇತಿಹಾಸದಲ್ಲಿ ಅಭ್ಯರ್ಥಿಯೊಬ್ಬರು ಪಡೆದ ಗರಿಷ್ಠ ಮತಗಳಾಗಿದೆ.

2019ರಲ್ಲಿ ಗೋಟಬಯಾ ರಾಜಪಕ್ಸೆ ಅಧ್ಯಕ್ಷ ಸ್ಥಾನದ ಗದ್ದುಗೆಗೇರಿದ್ದರು. ಇದೀಗ ದೇಶದ ಅಧ್ಯಕ್ಷ - ಪ್ರಧಾನಿಯಾಗಿ ರಾಜಪಕ್ಸೆ ಸಹೋದರರೇ ಆಡಳಿತ ನಡೆಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.