ಕೀವ್( ಉಕ್ರೇನ್): ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮುಂದುವರಿದಿದೆ. ಅದೆಷ್ಟೋ ಅಮೂಲ್ಯ ಜೀವಗಳು ಬಲಿಯಾಗಿವೆ, ಗಾಯಗೊಂಡಿವೆ. ಮತ್ತೊಂದಿಷ್ಟು ಜೀವಗಳು ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಉಕ್ರೇನ್ ಪರಿಸ್ಥಿತಿಯ ಕೆಲ ದೃಶ್ಯಗಳು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ರಷ್ಯಾದ ಕಠೋರ ಮನೋಭಾವನೆಯನ್ನು ಅವು ಸಾರುತ್ತಿವೆ.
ಉಕ್ರೇನ್ನಲ್ಲಿ ಹೋರಾಡುತ್ತಿರುವ ತನ್ನ ತಂದೆಗೆ ವಿದಾಯ ಹೇಳಿದ ನಂತರ ಪೋಲೆಂಡ್ನ ಗಡಿಯಲ್ಲಿ ಪುಟ್ಟ ಹುಡುಗಿಯೊಬ್ಬಳು ಕಣ್ಣೀರು ಹಾಕುತ್ತಿರುವ ಚಿತ್ರವು ರಷ್ಯಾದ ಆಕ್ರಮಣದಿಂದ ಉಂಟಾದ ಕ್ರಾಂತಿಯನ್ನು ತಿಳಿಸುತ್ತಿರುವಂತಿದೆ.
ಇದನ್ನೂ ಓದಿ: ಉಕ್ರೇನ್ ಅಧ್ಯಕ್ಷರ ಹತ್ಯೆಗೆ ರಷ್ಯಾದಿಂದ ನುರಿತ ಪಡೆಗಳ ರವಾನೆ!
ಫೋಟೋದಲ್ಲಿ ಪುಟ್ಟ ಹುಡುಗಿ ಒಂದು ಚಿಕ್ಕ ಬ್ಯಾಗ್ ಹಿಡಿದು, ಒಂದೆಡೆ ನಿಂತು ಕಣ್ಣೀರು ಹಾಕುತ್ತಿರುವುದನ್ನು ಕಾಣಬಹುದು. ಪೋಲೆಂಡ್ನ ಗಡಿಯಲ್ಲಿ ಲಕ್ಷಾಂತರ ಮಹಿಳೆಯರು ಮತ್ತು ಮಕ್ಕಳು ಬಂದು ಸೇರುತ್ತಿದ್ದಾರೆ. ಪತಿ ಮತ್ತು ತಂದೆಗೆ ವಿದಾಯ ಹೇಳಬೇಕಾದ ನಂತರ ಅವರ ಪರಿಸ್ಥಿತಿ ಏನೆಂಬುದು ಖಚಿತವಾಗಿಲ್ಲ.