ETV Bharat / international

ಕರಾಚಿ ವಿಮಾನ ಪತನ: 97 ಮಂದಿಯ ದುರ್ಮರಣ

ಪಾಕಿಸ್ತಾನದ ಕರಾಚಿಯಲ್ಲಿ ನಡೆದ ವಿಮಾನ ಪತನದಲ್ಲಿ ವಿಮಾನದಲ್ಲಿದ್ದ 99 ಮಂದಿಯ ಪೈಕಿ ಇಬ್ಬರು ಮಾತ್ರವೇ ಬದುಕುಳಿದಿದ್ದು, ಉಳಿದ 97 ಮಂದಿ ಮೃತಪಟ್ಟಿದ್ದಾರೆ.

author img

By

Published : May 23, 2020, 7:32 AM IST

Updated : May 23, 2020, 7:59 AM IST

plane crash
ಕರಾಚಿ ವಿಮಾನ ಪತನ

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 97 ಮಂದಿ ಮೃತಪಟ್ಟಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.

ಶುಕ್ರವಾರ ಸಂಜೆ ಪಾಕಿಸ್ತಾನ್​ ಇಂಟರ್​ನ್ಯಾಶನಲ್​ ಏರ್​ಲೈನ್ಸ್​​ (ಪಿಐಎ)ಗೆ ಸೇರಿದ ಎ -320 ವಿಮಾನ ಲ್ಯಾಂಡಿಂಗ್ ವೇಳೆ ಜನವಸತಿ ಪ್ರದೇಶದ ಮೇಲೆ ಪತನಗೊಂಡಿತ್ತು. ಲಾಹೋರ್​ನಿಂದ ಹೊರಟಿದ್ದ ವಿಮಾನ ಇನ್ನೇನು ಕರಾಚಿಯಲ್ಲಿ ಲ್ಯಾಂಡ್​ ಆಗಲಿದೆ ಎನ್ನುವಷ್ಟರಲ್ಲಿ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಈ ದುರಂತ ಸಂಭವಿಸಿದೆ.

  • 97 dead, 2 survivors from yesterday's Pakistan International Airlines (PIA) plane crash in Karachi: AFP news agency #PIA

    — ANI (@ANI) May 23, 2020 " class="align-text-top noRightClick twitterSection" data=" ">

ಈ ವಿಮಾನದಲ್ಲಿ 91 ಮಂದಿ ಪ್ರಯಾಣಿಕರು ಹಾಗೂ ಎಂಟು ಮಂದಿ ಸಿಬ್ಬಂದಿ ಸೇರಿ ಒಟ್ಟು 99 ಮಂದಿ ಇದ್ದರು. ಈ ಪೈಕಿ ಇಬ್ಬರು ಮಾತ್ರವೇ ಬದುಕುಳಿದಿದ್ದು ಉಳಿದ 97 ಮಂದಿ ಸಾವನ್ನಪ್ಪಿದ್ದಾರೆ.

ವಿಮಾನವು ಜನವಸತಿ ಪ್ರದೇಶದ ಮೇಲೆ ಪತನಗೊಂಡಿದ್ದರಿಂದ ಅನೇಕ ಮನೆಗಳಿಗೆ ಹಾನಿಯಾಗಿದ್ದು, ಅವಶೇಷಗಳಡಿ ಸಿಲುಕಿ ಅನೇಕ ಸ್ಥಳೀಯರೂ ಗಾಯಗೊಂಡಿದ್ದರು.

Last Updated : May 23, 2020, 7:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.