ETV Bharat / international

ತಾಲಿಬಾನ್​ ಮುಖ್ಯಸ್ಥನ ಭೇಟಿಯಾದ ಮಸೂದ್ ಅಜರ್​​.. ಕಾಶ್ಮೀರ ವಶಕ್ಕೆ ಸಹಾಯ?

ಜಮ್ಮು - ಕಾಶ್ಮೀರದ ಮೇಲೆ ಮತ್ತೊಮ್ಮೆ ಹಿಡಿತ ಸಾಧಿಸುವ ಇರಾದೆ ಇಟ್ಟುಕೊಂಡಿರುವ ಮಸೂದ್​ ಅಜರ್ ಇದೀಗ ತಾಲಿಬಾನ್​ ಮುಖ್ಯಸ್ಥರ ಭೇಟಿ ಮಾಡಿ, ಸಹಾಯಹಸ್ತ ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Jaish-e-mohammed
Jaish-e-mohammed
author img

By

Published : Aug 27, 2021, 9:42 PM IST

ಕಾಬೂಲ್​​(ಆಫ್ಘಾನಿಸ್ತಾನ): ತಾಲಿಬಾನ್​ ಉಗ್ರರು ಈಗಾಗಲೇ ಆಫ್ಘಾನಿಸ್ತಾನದಲ್ಲಿ ಸಂಪೂರ್ಣವಾಗಿ ತಮ್ಮ ಪ್ರಾಬಲ್ಯ ಸಾಧಿಸಿದ್ದು, ಎಲ್ಲ ಪ್ರದೇಶಗಳನ್ನ ತಮ್ಮ ಹತೋಟಿಗೆ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಜೈಶ್​​-ಇ-ಮೊಹಮ್ಮದ್​ ಮುಖ್ಯಸ್ಥ ಮೌಲಾನ್​ ಮಸೂದ್​​ ಅಜರ್​​​ ಅಲ್ಲಿನ ಮುಖ್ಯಸ್ಥನ ಭೇಟಿ ಮಾಡಿದ್ದಾರೆಂಬ ಮಾಹಿತಿ ಬಹಿರಂಗಗೊಂಡಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ವಿಜಯ ಪತಾಕೆ ಹಾರಿಸಿರುವುದಕ್ಕೆ ಈಗಾಗಲೇ ಮಸೂದ್​ ಅಜರ್​​ ಹರ್ಷ ವ್ಯಕ್ತಪಡಿಸಿದ್ದು, ಇದರ ಬೆನ್ನಲ್ಲೇ ಅಲುನ ಮುಖ್ಯಸ್ಥರ ಭೇಟಿ ಮಾಡಿದ್ದಾಗಿ ವರದಿಯಾಗಿದೆ. ಜೊತೆಗೆ ಜಮ್ಮು-ಕಾಶ್ಮೀರ ವಿಚಾರದಲ್ಲಿ ತಮಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಭಾರತದಲ್ಲಿ ಬಂಧಿಯಾಗಿದ್ದ ಮೌಲಾನ್​ ಮಸೂದ್​ ಅಜರ್​ ಬಿಡುಗಡೆಗೆ ಪಾಕ್​ ಉಗ್ರರು, ಕಂಠ್ಮಡು- ಲಖನೌ ವಿಮಾನ ಹೈಜಾಕ್​ ಮಾಡಿದ್ದರು. ಇದನ್ನ ಕಂದಹಾರ್​​ನಲ್ಲಿ ಇಳಿಸಿದ ಬಳಿಕ ಮಸೂದ್​ ಅಜರ್​ ಬಿಡುಗಡೆಗೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಉಗ್ರನನ್ನ ರಿಲೀಸ್ ಮಾಡಲಾಗಿತ್ತು.

ಇದನ್ನೂ ಓದಿರಿ: Watch: ಕಾಬೂಲ್​​​ನಲ್ಲಿ ಬಾಂಬ್​ ಸ್ಫೋಟಗೊಳ್ಳುವುದಕ್ಕೂ ಮುಂಚೆ ಜನ್ರು ಈ ರೀತಿ ಓಡಿದ್ರು!

1999ರಿಂದ ನೆರೆಯ ಪಾಕಿಸ್ತಾನದ ಸಹಾಯ ಪಡೆದುಕೊಂಡು ಕಣಿವೆ ನಾಡು ಜಮ್ಮು-ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಉಗ್ರ ದಾಳಿ ನಡೆಸುತ್ತಿರುವ ಮಸೂದ್​ ಅಜರ್​, ತಾಲಿಬಾನ್​ ಸಹಾಯ ಕೇಳಿಕೊಂಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್​ 370 ರದ್ದುಗೊಂಡಾಗಿನಿಂದಲೂ ಅನೇಕ ರೀತಿಯ ಬದಲಾವಣೆ ಮಾಡಲಾಗಿದ್ದು, ಅಲ್ಲಿನ ಯೋಧರು ಹಾಗೂ ಪೊಲೀಸರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲಾಗಿದೆ. ಹೀಗಾಗಿ ಉಗ್ರ ಸಂಘಟನೆಗಳಿಗೆ ಸಂಪೂರ್ಣವಾಗಿ ಕಡಿವಾಣ ಬಿದ್ದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.