ನವದೆಹಲಿ: ಚೀನಾದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಅಲಿಬಾಬಾ ಮತ್ತು ಆ್ಯಂಟ್ ಗ್ರೂಪ್ಗಳ ಸಂಸ್ಥಾಪಕ ಜಾಕ್ ಮಾ ಅಲ್ಲಿನ ಕಾನೂನುಗಳ ಕಾರಣದಿಂದ ಹಿನ್ನಡೆ ಅನುಭವಿಸುವಂತಾಗಿದೆ.
ಮಂಗಳವಾರ ಹುರುನ್ ಗ್ಲೋಬಲ್ ರಿಚ್-2021 ಪಟ್ಟಿ ಬಿಡುಗಡೆ ಮಾಡಿದ್ದು, ಈ ವರದಿ ಪ್ರಕಾರ ಜಾಕ್ ಮಾ ಆಧಾಯ 55 ಬಿಲಿಯನ್ ಯುಎಸ್ ಡಾಲರ್ಗಳಷ್ಟಿದೆ. ಈ ಮೊದಲು ಚೀನಾದಲ್ಲೇ ಅತಿ ಶ್ರೀಮಂತರ ಪಟ್ಟಿಯಲ್ಲಿದ್ದ ಜಾಕ್ ಮಾ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.
57 ವರ್ಷದ ಜಾಕ್ ಮಾ ಹಿಂದಿನ ವರ್ಷ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೊದಲ ಮೂರು ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಚೀನಾದ ಕಾನೂನುಗಳು ಅಲಿಬಾಬಾ ಮತ್ತು ಆ್ಯಂಟ್ ಗ್ರೂಪ್ನ ಮೇಲೆ ಮಾಡಿರುವ ದುಷ್ಪರಿಣಾಮಗಳೇ ಇದೆಲ್ಲಕ್ಕೂ ಕಾರಣ ಎಂದು ಹುರುನ್ ಗ್ಲೋಬಲ್ ರಿಚ್-2021 ಹೇಳಿದೆ.'
ಇದನ್ನೂ ಓದಿ: ಚುನಾವಣಾ ರ‍್ಯಾಲಿಗೆ ತಡವಾಯ್ತೆಂದು ಓಡೋಡಿ ಬಂದ ಪ್ರಿಯಾಂಕಾ: ವಿಡಿಯೋ
ಮಾಧ್ಯಮ ವರದಿಗಳ ಪ್ರಕಾರ ಜಾಕ್ ಮಾ ಅಕ್ಟೋಬರ್ 23ರಂದು ಭಾಷಣವೊಂದರಲ್ಲಿ ಚೀನಾದ ಕಾನೂನುಗಳ ವಿರುದ್ಧ ಹರಿಹಾಯ್ದಿದ್ದರು. ಚೀನಾದ ಆರ್ಥಿಕತೆ ನ್ಯೂನತೆಗಳನ್ನು ಒಳಗೊಂಡಿದೆ. ಚೀನಾದ ಬ್ಯಾಂಕ್ಗಳು ಹಳೆ ಕ್ಲಬ್ ಸದಸ್ಯರ ಮನೋಭಾವದಿಂದ ಹೊರಬಂದು ವಿಶಾಲವಾಗಿ ಯೋಚಿಸಬೇಕಿದೆ ಎಂದು ಆಗ್ರಹಿಸಿ, ಚೀನಾದ ಕೆಂಗಣ್ಣಿಗೆ ಗುರಿಯಾಗಿದ್ದರು.
ನಂತರದ ದಿನಗಳಲ್ಲಿ ಜಾಕ್ ಹೊರಗಿನ ಪ್ರಪಂಚಕ್ಕೆ ಕಾಣಿಸಿಕೊಳ್ಳದೆ ಅಗೋಚರವಾದರು. ಅವರ ಕಣ್ಮರೆಯ ಬಗ್ಗೆ ಅನೇಕ ಅನುಮಾನಗಳು ಹುಟ್ಟಿಕೊಂಡು, ಇತ್ತೀಚಿಗೆ ಸಾಮಾಜಿಕ ಜಾಲತಾಣದ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದ, ಅವರ ಉದ್ಯಮದ ಹಿನ್ನಡೆಗೆ ಚೀನಾ ಸರ್ಕಾರದ ನೀತಿಗಳೇ ಕಾರಣ ಎಂದು ಹೇಳಲಾಗುತ್ತಿದೆ.