ರೋಮ್(ಇಟಲಿ): ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ನಿವಾಸದಲ್ಲೇ ವಾಸವಾಗಿರುವ ಪಾದ್ರಿಯೊಬ್ಬರಿಗೆ ಕೋವಿಡ್-19 ಇರುವುದು ದೃಢವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
83 ವರ್ಷದ ಈ ಕ್ರೈಸ್ತ ಗುರು, ಸೇಂಟ್ ಮಾರ್ಥಾ ಅವರ ಅತಿಥಿಗೃಹದಲ್ಲಿ ಕೆಲ ವರ್ಷಗಳಿಂದ ವಾಸವಿದ್ದು, ಪೋಪ್ ನಿವಾಸದದಲ್ಲಿ ಇವರು ಹೊಂದಿರುವ ಸಣ್ಣ ಅಪಾರ್ಟ್ಮೆಂಟ್ಗೆ ಊಟ ಮಾಡಲು, ಖಾಸಗಿ ಸಭೆಗಳನ್ನು ನಡೆಸಲು ಹೋಗುತ್ತಿರುತ್ತಾರೆ. ಅಲ್ಲದೇ ಆಗಾಗ್ಗೆ ವ್ಯಾಟಿಕನ್ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ವ್ಯಾಟಿಕನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಇನ್ನು, ಇಟಲಿಯಲ್ಲಿ ಕೋವಿಡ್-19ಗೆ ಇಂದು ಒಂದೇ ದಿನ 662 ಮಂದಿ ಮೃತಪಟ್ಟಿದ್ದು, ದೇಶದಲ್ಲಿ ಸಾವಿನ ಸಂಖ್ಯೆ 8,165ಕ್ಕೆ ಏರಿಕೆಯಾಗಿದೆ. ಅಲ್ಲದೇ 24 ಗಂಟೆಗಳಲ್ಲಿ 6,153 ಹೊಸ ಪ್ರಕರಣಗಳು ಪತ್ತೆಯಾಗಿವೆ.