ಜೆರುಸಲೇಂ(ಇಸ್ರೇಲ್) : ಪ್ಯಾಲೆಸ್ತೀನಿಯನ್ ಎನ್ಕ್ಲೇವ್ ಮೇಲೆ ಹಾರಿಸಿದ ಎರಡು ರಾಕೆಟ್ಗಳು ಇಸ್ರೇಲಿ ಭದ್ರತಾ ಬೇಲಿ ಬಳಿ ಬಿದ್ದ ನಂತರ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಹೆಚ್ಚಾಗಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾದ ಹಮಾಸ್ ತಾಣಗಳಲ್ಲಿ ವೈಮಾನಿಕ ದಾಳಿ ನಡೆಸಿದೆ ಎಂದು ಮಿಲಿಟರಿ ಶುಕ್ರವಾರ ತಿಳಿಸಿದೆ.
"ಇಸ್ಲಾಮಿಕ್ ಹಮಾಸ್ ಆಂದೋಲನಕ್ಕೆ ಸೇರಿದ ಭೂಗತ ಮೂಲ ಸೌಕರ್ಯ ಮತ್ತು ಸುರಂಗ ನಿರ್ಮಾಣಕ್ಕೆ ಬಳಸುವ ಕಾಂಕ್ರೀಟ್ ಉತ್ಪಾದನಾ ತಾಣವನ್ನು ಯುದ್ಧ ವಿಮಾನಗಳು ಹೊಡೆದುರುಳಿಸುವೆ" ಎಂದು ಇಸ್ರೇಲಿ ಮಿಲಿಟರಿ ವಕ್ತಾರರು ಹೇಳಿದ್ದಾರೆ.
ಎರಡೂ ಕಡೆ ಸಾವು ನೋವುಗಳ ಬಗ್ಗೆ ಯಾವುದೇ ವರದಿಯಾಗಿಲ್ಲ. ಗಾಜಾ ಪಟ್ಟಿಯ ಉಗ್ರಗಾಮಿ ಗುಂಪುಗಳು ಆಕಾಶಬುಟ್ಟಿಗಳ ಮೂಲಕ ಸ್ಫೋಟಕ ವಸ್ತುಗಳನ್ನು ದಕ್ಷಿಣ ಇಸ್ರೇಲ್‌ಗೆ ಕಳುಹಿಸಿದ್ದರಿಂದ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
ಕಳೆದ 11 ದಿನಗಳಿಂದ ಇಸ್ರೇಲ್ ದೈನಂದಿನ ವೈಮಾನಿಕ ದಾಳಿ ಮತ್ತು ಹಮಾಸ್ ತಾಣಗಳ ವಿರುದ್ಧ ಫಿರಂಗಿ ದಾಳಿ ನಡೆಸುತ್ತಲಿದೆ.