ETV Bharat / international

ಇರಾಕ್​ನಲ್ಲಿ ISIS ಉಗ್ರರ ಅಟ್ಟಹಾಸ.. ಭಯೋತ್ಪಾದಕ ದಾಳಿಯಲ್ಲಿ ಹಲವರು ಸಾವು

ಈರಾಕ್​ನಲ್ಲಿ ಶವಸಂಸ್ಕಾರದ ಮೆರವಣಿಗೆ ಮೇಲೆ ಐಸಿಸ್ ಉಗ್ರಪಡೆ ದಾಳಿ ನಡೆಸಿದ್ದು, ಹಲವು ಜನರು ಮೃತಪಟ್ಟಿದ್ದಾರೆ.

ಉಗ್ರ ದಾಳಿ
ಉಗ್ರ ದಾಳಿ
author img

By

Published : Jul 31, 2021, 7:59 AM IST

ಬಾಗ್ದಾದ್(ಇರಾಕ್​): ಉತ್ತರ ಇರಾಕ್​ನಲ್ಲಿ ಶುಕ್ರವಾರ ಶವಸಂಸ್ಕಾರದ ಮೆರವಣಿಗೆ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹಲವು ಮಂದಿ ಮೃತಪಟ್ಟಿದ್ದಾರೆಂದು ಇಲ್ಲಿನ ಸೇನೆ ತಿಳಿಸಿದೆ. ಸಲಾಹುದ್ದೀನ್ ಪ್ರಾಂತ್ಯದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹಲವು ಜನರು ಮೃತಪಟ್ಟಿದ್ದು, ಅಂಕಿ-ಅಂಶಗಳು ಲಭ್ಯವಿಲ್ಲ ಎಂದು ಸೇನೆ ತಿಳಿಸಿದೆ.

ಆದರೆ, ಇರಾಕ್​ನ ಭದ್ರತಾಪಡೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಘಟನೆಯಲ್ಲಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ಪೊಲೀಸರು, ಸಾರ್ವಜನಿಕರು ಸೇರಿದ್ದಾರೆ ಎಂದು ತಿಳಿಸಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಸಂಘಟನೆ ಈ ದಾಳಿ ನಡೆಸಿದ್ದು, ತನಿಖೆ ಪೂರ್ಣಗೊಂಡ ಬಳಿಕ ಎಲ್ಲಾ ವಿವರ ನೀಡುವುದಾಗಿ ಸೇನೆ ಮಾಹಿತಿ ನೀಡಿದೆ. 2017 ರಿಂದೀಚೆಗೆ ಉತ್ತರ ಇರಾಕ್ ಐಎಸ್ ಚಟುವಟಿಕೆಯ ಹಾಟ್ ಸ್ಪಾಟ್ ಆಗಿದೆ.

ಇದನ್ನೂ ಓದಿ: ಲಡಾಖ್​ ಗಡಿ ವಿವಾದ: ಇಂಡೋ-ಚೀನಾ ನಡುವೆ 12 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಸಭೆ

ಇರಾಕ್​ ಪಡೆಗಳು ಎಷ್ಟೇ ಬಿಗಿ ಕ್ರಮ ಕೈಗೊಂಡರೂ, ಐಸಿಸ್ ದಾಳಿ ನಿಗ್ರಹಿಸಲು ಸಾಧ್ಯವಾಗಿಲ್ಲ, ಉಗ್ರಪಡೆಯ ದಾಳಿಗಳು ಮುಂದುವರಿಯುತ್ತಲೇ ಇದೆ. ಕಳೆದ ವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 30 ಜನರು ಮೃತಪಟ್ಟಿದ್ದರು. ಈ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿತ್ತು. ಆದರೆ, ಈ ದಾಳಿಯ ಬಗ್ಗೆ ಉಗ್ರ ಸಂಘಟನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.