ETV Bharat / international

ಬಂಗಾಳ ಕೊಲ್ಲಿಯಲ್ಲಿ ನೌಕಾಪಡೆ ಆಪರೇಷನ್ ಮಲಬಾರ್ ಸಮರಾಭ್ಯಾಸ; ಚೀನಾಗೆ ಕಠಿಣ ಸಂದೇಶ - ಚೀನಾ

ಪೂರ್ವ ಲಡಾಖ್‌ನಲ್ಲಿ ಗಡಿ ಸಂಘರ್ಷದ ಬಗ್ಗೆ 13ನೇ ಸುತ್ತಿನ ಭಾರತ-ಚೀನಾ ಸೇನಾ ಮಟ್ಟದ ಮಾತುಕತೆ ವಿಫಲವಾದ ಮರುದಿನವೇ ಬಂಗಾಳ ಕೊಲ್ಲಿಯಲ್ಲಿ ಭಾರತ ಎರಡನೇ ಹಂತದ ಆಪರೇಷನ್ ಮಲಬಾರ್ ಸಮರಾಭ್ಯಾಸವನ್ನು ಕ್ವಾಡ್ ದೇಶಗಳೊಂದಿಗೆ ಆರಂಭಿಸಿದೆ. ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಸೇನೆಗಳು ಶಕ್ತಿ ಪ್ರದರ್ಶನದಲ್ಲಿ ಭಾಗಿಯಾಗಿವೆ..

indian navy sent a strong message to china by conducting operation malabar in the bay of bengal
ಬಂಗಾಳ ಕೊಲ್ಲಿಯಲ್ಲಿ ಕ್ವಾಡ್‌ ದೇಶಗಳ ಆಪರೇಷನ್ ಮಲಬಾರ್ ಸಮರಾಭ್ಯಾಸ; ಚೀನಾಗೆ ಭಾರತ ಕಠಿಣ ಸಂದೇಶ
author img

By

Published : Oct 13, 2021, 4:06 PM IST

13ನೇ ಸುತ್ತಿನ ಭಾರತ - ಚೀನಾ ಸೇನಾ ಮಾತುಕತೆಗಳು ವಿಫಲವಾದ ನಂತರ ಭಾರತೀಯ ನೌಕಾಪಡೆ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಜೊತೆಗೆ ಬಂಗಾಳ ಕೊಲ್ಲಿಯಲ್ಲಿ 'ಆಪರೇಷನ್ ಮಲಬಾರ್' ಸಮರಾಭ್ಯಾಸದ ಮೂಲಕ ಡ್ರ್ಯಾಗನ್ ದೇಶಕ್ಕೆ ಕಠಿಣ ಸಂದೇಶ ರವಾನಿಸಿದೆ.

ಇದೇ 11 ರಿಂದ 15ರವರೆಗೆ ನಡೆಯುತ್ತಿರುವ ಸಮರಾಭ್ಯಾಸದ ನಡುವೆಯೇ ಯುಎಸ್ ನೌಕಾಪಡೆಯ ಕಮಾಂಡರ್ ಅಡ್ಮಿರಲ್ ಮೈಕೆಲ್ ಗಿಲ್ಡೆ ದೆಹಲಿಗೆ ಆಗಮಿಸಿ ಭಾರತೀಯ ನೌಕಾಪಡೆಯ ಕಮಾಂಡರ್ ಅಡ್ಮಿರಲ್ ಕರಂಬೀರ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಸಾಮಾನ್ಯವಾಗಿ ಭಾರತ-ಚೀನಾ ಸೇನೆಯ ಉನ್ನತ ಮಟ್ಟದ ಮಾತುಕತೆಗಳು ಮುಕ್ತಾಯಗೊಂಡ ನಂತರ ಹೊರಡಿಸಿದ ಹೇಳಿಕೆಗಳು ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಿಶ್ವಾಸವನ್ನು ವ್ಯಕ್ತಪಡಿಸಿವೆ. ಭಾರತದ ಅಧಿಕೃತ ಹೇಳಿಕೆಯ ಪ್ರಕಾರ, ಇತ್ತೀಚಿನ ಸಭೆಯ ನಂತರ, ಗಡಿ ಮಾತುಕತೆಯಲ್ಲಿ ಚೀನಾ ಮಿಲಿಟರಿ ತನ್ನ ನಿಲುವನ್ನು ಒಪ್ಪಲಿಲ್ಲ ಮತ್ತು ಪರಿಹಾರಕ್ಕಾಗಿ ಯಾವುದೇ ಪ್ರಸ್ತಾಪವನ್ನು ಮಂಡಿಸಲಿಲ್ಲ.

ಪರಸ್ಪರ ಆರೋಪ- ಪ್ರತ್ಯಾರೋಪ ಸಭೆ ವಿಫಲ

ಮತ್ತೊಂದೆಡೆ, ಚೀನಾ ಸೇನೆ ಕೂಡ ಭಾರತೀಯ ಸೇನೆಯು ಅವಾಸ್ತವಿಕ ಮತ್ತು ಅವಿವೇಕದ ಮನೋಭಾವವನ್ನು ಅಳವಡಿಸಿಕೊಂಡಿದೆ. ಇದರಿಂದಾಗಿ ಮಾತುಕತೆಗಳು ಮುಂದುವರಿಯಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದೆ. 13ನೇ ಸುತ್ತಿನ ಭಾರತ-ಚೀನಾ ಸಭೆ ವಿಫಲವಾದ ಮರುದಿನವೇ ಬಂಗಾಳ ಕೊಲ್ಲಿಯಲ್ಲಿ ಭಾರತ ಎರಡನೇ ಹಂತದ ಆಪರೇಷನ್ ಮಲಬಾರ್ ಸಮರಾಭ್ಯಾಸವನ್ನು ಕ್ವಾಡ್ ದೇಶಗಳೊಂದಿಗೆ ಆರಂಭಿಸಿತು. ಮೊದಲ ಹಂತದಲ್ಲಿ ಫಿಲಿಪೈನ್ ಸಮುದ್ರದಲ್ಲಿ ಆಗಸ್ಟ್ 26-29ರವರೆಗೆ ನಡೆದಿತ್ತು.

ಚೀನಾ ಆಕ್ರಮಣ ತಡೆಯಲು ಕ್ವಾಡ್​ ಒಕ್ಕೂಟ

ಇಂಡೋ-ಪೆಸಿಫಿಕ್‌ನಲ್ಲಿ ಚೀನಾದ ಆಕ್ರಮಣವನ್ನು ತಡೆಯಲು ನಾಲ್ಕು ದೇಶ ಕ್ವಾಡ್ ಒಕ್ಕೂಟವನ್ನು ರಚಿಸಲಾಗಿದೆ. ಆದರೆ, ಈ ದೇಶಗಳು ಚೀನಾದ ಬಗ್ಗೆ ಕಾಳಜಿವಹಿಸುವುದಿಲ್ಲ. ಬಂಗಾಳ ಕೊಲ್ಲಿಯಲ್ಲಿ ಚೀನಾದ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳ ಚಲನೆ ಇತ್ತೀಚೆಗೆ ಹೆಚ್ಚಾಗಿದೆ. ಇದರೊಂದಿಗೆ, ಕ್ವಾಡ್ ರಾಷ್ಟ್ರಗಳು ಶತ್ರು ಹಡಗುಗಳು ಮತ್ತು ಜಲಾಂತರ್ಗಾಮಿಗಳಿಗೆ ಕಠಿಣ ಸಂದೇಶ ರವಾನಿಸಲು ಸಮರಾಭ್ಯಾಸ ನಡೆಸುತ್ತಿವೆ. ತಮ್ಮ ನಾವಿಕರಲ್ಲಿ ಸಮನ್ವಯವನ್ನು ಹೆಚ್ಚಿಸಲು ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಜಂಟಿ ಶಕ್ತಿ ಪ್ರದರ್ಶನ ಮಾಡುತ್ತಿವೆ.

ಅಮೆರಿಕ ನೌಕಾಪಡೆ ಮುಖ್ಯಸ್ಥ ಗಿಲ್ಡೆ ಭಾರತಕ್ಕೆ ಆಗಮನ

ಯುಎಸ್ ನೌಕಾಪಡೆಯ ಕಮಾಂಡರ್ ಅಡ್ಮಿರಲ್ ಮೈಕಲ್ ಗಿಲ್ಡೆ ಅವರ ಭಾರತ ಪ್ರವಾಸದಲ್ಲಿದ್ದಾರೆ. ಮುಂಬೈ ಮತ್ತು ವಿಶಾಖಪಟ್ಟಣಂನಲ್ಲಿರುವ ಭಾರತೀಯ ನೌಕಾಪಡೆಯ ಪಶ್ಚಿಮ ಮತ್ತು ಪೂರ್ವ ಕಮಾಂಡ್ ಕಚೇರಿಗಳಿಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಭಾರತೀಯ ಸೇನಾ ಕಮಾಂಡರ್‌ಗಳೊಂದಿಗೂ ಅವರು ಚರ್ಚೆ ನಡೆಸಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ಯುಎಸ್ ಯುದ್ಧನೌಕೆಗಳನ್ನು ಭೇಟಿ ಮಾಡಲು ಭಾರತೀಯ ನಿಯೋಗದೊಂದಿಗೆ ಸ್ಥಳಕ್ಕೆ ತೆರಳಲಿದ್ದಾರೆ. 2016ರಲ್ಲಿ ಅಮೆರಿಕವು ಭಾರತವನ್ನು ಪ್ರಮುಖ ರಕ್ಷಣಾ ಪಾಲುದಾರ ಎಂದು ಗುರುತಿಸಿದಾಗಿನಿಂದ, ಉಭಯ ದೇಶಗಳು ಹಲವಾರು ಪ್ರಮುಖ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಕಾರ್ಯತಂತ್ರವಾಗಿ ಆಪ್ತವಾಗಿವೆ.

ಇದನ್ನೂ ಓದಿ: ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ಗಡಿ ಸಂಘರ್ಷ; 13ನೇ ಸುತ್ತಿನ ಮಾತುಕತೆಯೂ ವಿಫಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.