ETV Bharat / international

ಕಾಬೂಲ್‌ನಿಂದ 85 ಭಾರತೀಯರನ್ನ ಹೊತ್ತು Air Force C-130J ವಿಮಾನ ದೆಹಲಿಯತ್ತ ಪ್ರಯಾಣ

author img

By

Published : Aug 21, 2021, 11:54 AM IST

Updated : Aug 21, 2021, 2:47 PM IST

85 ಭಾರತೀಯರನ್ನು ಹೊತ್ತ ವಾಯುಸೇನೆಯ ಸಿ-130ಜೆ ವಿಮಾನ ಕಾಬೂಲ್‌ನಿಂದ ಹೊರಟಿದ್ದು, ರಿಫಿಲ್ಲಿಂಗ್‌ಗಾಗಿ ತಜಕಿಸ್ತಾನದಲ್ಲಿ ಲ್ಯಾಂಡಿಂಗ್‌ ಆಗಿದೆ.

Indian Air Force C-130J takes off from Kabul with over 85 Indians
ಕಾಬೂಲ್‌ನಿಂದ 85 ಭಾರತೀಯರನ್ನ ಹೊತ್ತ ವಾಯುಸೇನೆಯ ಸಿ-130ಜೆ ವಿಮಾನ ದೆಹಲಿಯತ್ತ ಪ್ರಯಾಣ; ತಜಕಿಸ್ತಾನದಲ್ಲಿ ರಿಫಿಲ್ಲಿಂಗ್‌

ಹೈದರಾಬಾದ್‌: ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ 85 ಭಾರತೀಯರನ್ನು ಹೊತ್ತ ವಾಯುಸೇನೆಯ ಸಿ-130ಜೆ ವಿಮಾನ ಭಾರತದತ್ತ ಹೊರಟಿದ್ದು, ತೈಲ ತುಂಬಿಸಿಕೊಳ್ಳಲು ತಜಕಿಸ್ತಾನದಲ್ಲಿ ಲ್ಯಾಂಡ್‌ ಆಗಿದೆ. ಕಾಬೂಲ್‌ನಲ್ಲಿ ಸಿಲುಕಿದ್ದ ಭಾರತೀಯರ ರಕ್ಷಣೆಯ ಕಾರ್ಯಾಚರಣೆಯನ್ನು ಅಧಿಕಾರಿಗಳು ಮುಂದುವರಿಸಿದ್ದಾರೆ.

ಕೆಲ ದಿನಗಳಿಂದ ಅಮೆರಿಕದ ನೆರವಿನೊಂದಿಗೆ ಕೇಂದ್ರ ಸರ್ಕಾರ ಭಾರತೀಯ ವಾಯು ಸೇನೆಯ ವಿಮಾನಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. 250 ಮಂದಿಯನ್ನು ರಕ್ಷಿಸುವ ಗುರಿ ಹೊಂದಲಾಗಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಹಲವರು ಅತ್ಯಂತ ಕಠಿಣ ಪ್ರದೇಶಗಳಲ್ಲಿ ಸಿಲುಕಿದ್ದು, ವಿಮಾನ ನಿಲ್ದಾಣಕ್ಕೆ ಬರಲು ಸಾಧ್ಯವಾಗುತ್ತಿಲ್ಲ.

ಈ ಪ್ರದೇಶಗಳು ತಾಲಿಬಾನ್‌ಗಳ ಕಣ್ಗಾವಲಿನಲ್ಲಿ ಇವೆ. ಜನರ ಚಲನವಲಗಳನ್ನು ಗಮನಿಸುತ್ತಿರುವ ಉಗ್ರ ಸಂಘಟನೆ ಚೆಕ್‌ಪಾಯಿಂಟ್‌ಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಒಂದು ಮಾಹಿತಿಯ ಪ್ರಕಾರ ಇನ್ನೂ 400 ಮಂದಿ ಭಾರತೀಯರ ರಕ್ಷಣೆ ಮಾಡಬೇಕಾಗಿದೆ.

Last Updated : Aug 21, 2021, 2:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.