ಇಸ್ಲಾಮಾಬಾದ್: ಭಾರತ ಪಾಕಿಸ್ತಾನವನ್ನು ಹಣಕಾಸು ಕ್ರಿಯಾ ಕಾರ್ಯಪಡೆಯ (ಎಫ್ಎಟಿಎಫ್) ಕಪ್ಪು ಪಟ್ಟಿಗೆ ಸೇರಿಸಲು ಇನ್ನಿಲ್ಲದ ಕಸರತುಗಳನ್ನು ನಡೆಸುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಷಿ ಆಪಾದಿಸಿದ್ದಾರೆ.
ಪರಸ್ಪರ ಮೌಲ್ಯಮಾಪನ ಎಂಬ ಹೆಸರಿನಡಿ ಏಷ್ಯಾ ಫೆಸಿಫಿಕ್ ಗುಂಪು (ಎಸಿಜಿ) ಈಚೆಗೆ ಸಲ್ಲಿಸಿದ ತನ್ನ ವರದಿಯಲ್ಲಿ, 'ಪಾಕಿಸ್ತಾನ ಎಫ್ಎಟಿಎಫ್ನ 40 ಸಲಹೆಗಳಲ್ಲಿ ಪಾಲನೆಯಾಗಿದ್ದು ಒಂದೇ ಸಲಹೆ' ಎಂದು ತಿಳಿಸಿತು.
ಜಾಗತಿಕ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಖುರೇಷಿ ಅವರು, ಭಾರತ ಮೊದಲಿಂದಲೂ ಎಫ್ಎಟಿಎಫ್ನಲ್ಲಿ ಪಾಕಿಸ್ತಾನ ಇರುವುದನ್ನು ವಿರೋಧಿಸಿಕೊಂಡು ಬರುತ್ತಿದೆ. ಇದರ ಸ್ಪಷ್ಟ ನಿಲುವು ಪಾಕ್ ಅನ್ನು ಕಪ್ಪು ಪಟ್ಟಿಗೆ ಸೇರಿಸುವುದು ಎಂಬುದು ಮೋಲ್ನೋಟಕ್ಕೆ ಕಾಣಿಸುತ್ತದೆ ಎಂದರು.
ಅಮೆರಿಕಕ್ಕೆ ನಮ್ಮ ಸ್ಥಾನ ಏನು ಎಂಬುದು ಗೊತ್ತಿದೆ ಮತ್ತು ಅವರು ನಮ್ಮನ್ನು ಅರ್ಥೈಸಿಕೊಳ್ಳಲಿದ್ದಾರೆ. ಅವರು ನಮಗೆ ಸಹಕಾರ ನೀಡಲಿದ್ದಾರೆ. ಪಾಕಿಸ್ತಾನ ಈಚೆಗೆ ತೆಗೆದುಕೊಂಡು ಕೆಲವು ಪ್ರಗತಿದಾಯಕ ನಡೆಗಳಿಗೆ ಮೆಚ್ಚಿ ಅಮೆರಿಕ ನಮಗೆ ಬೆಂಬಲ ನೀಡಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.