ಇಸ್ಲಾಮಾಬಾದ್ : ಭಾರತ ಸೇನೆಯ ಆಕ್ರಮಣಕಾರಿ ಮೂಲಕ ಪಾಕಿಸ್ತಾನಕ್ಕೆ ಬೆದರಿಕೆ ಹಾಕುತ್ತಿದೆ ಎಂದು ಪಾಕ್ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೊಹ್ಮದ್ ಖುರೇಶಿ ಆರೋಪಿಸಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಂಗವಾಗಿ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಸದಸ್ಯರ ಸಭೆಯಲ್ಲಿ ಮಾತನಾಡಿರುವ ಶಾ, ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಸ್ಥಿತಿ ಹದಗೆಟ್ಟಿದೆ ಎಂದು ಹೇಳುವ ಮೂಲಕ ಉದ್ಧಟತನ ತೋರಿದ್ದಾರೆ.
ನೂತನ ವಿಧಾನಸಭೆಯಲ್ಲಿ ಅಧಿಕೃತ ಉರ್ದು ಭಾಷೆ ಬದಲಾಯಿಸಲು ಹೊರಟಿದೆ ಎಂತಲೂ ಆರೋಪಿಸಿದ್ದಾರೆ. ಐಒಸಿ ಸದಸ್ಯರೊಂದಿಗೆ ಸಭೆಯಲ್ಲಿ ಮಾನವ ಹಕ್ಕುಗಳು, ಜಮ್ಮು ಮತ್ತು ಕಾಶ್ಮೀರದಲ್ಲಿನ ಬೆಳವಣಿಗೆಗಳು ಹಾಗೂ ಗಡಿ ನಿಯಂತ್ರಣ ರೇಖೆ(ಎನ್‌ಒಸಿ)ಯಲ್ಲಿ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಆಕ್ರಮಿತ ಪ್ರದೇಶದಲ್ಲಿ ಆರ್‌ಎಸ್‌ಎಸ್-ಬಿಜೆಪಿ ನೇತೃತ್ವದ ಸರ್ಕಾರ 'ಸೋ-ಕಾಲ್ಡ್' ಅಂತಿಮ ಪರಿಹಾರ ಜಾರಿಗೆ ಮಾಡಲು ಹೊರಟಿದೆ ಎಂದು ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ್ ಆರೋಪಿಸಿದ್ದಾರೆ. ಕಳೆದ ಮಾರ್ಚ್‌ನಿಂದ ಈವರೆಗೆ 10,60,000 ಜನರ ನಿವಾಸ ಪ್ರಮಾಣ ಪತ್ರಗಳನ್ನು ಬದಲಾಯಿಸುವ ಮೂಲಕ ಮುಸ್ಲಿಂ ಮೆಜಾರಿಟಿಯನ್ನು ಹಿಂದೂ ಮೆಜಾರಿಟಿಯನ್ನಾಗಿ ಮಾಡಲಾಗಿದೆ ಎಂದು ದೂರಿದ್ದಾರೆ.