ಇಸ್ಲಾಮಾಬಾದ್ : ಜಮ್ಮು-ಕಾಶ್ಮೀರದ ಚೆನಾಬ್ ನದಿಯಲ್ಲಿ ವಿದ್ಯುತ್ ಸ್ಥಾವರ ನಿರ್ಮಿಸಲು ಭಾರತ ಮುಂದಾದಾಗೆಲ್ಲ ಪಾಕಿಸ್ತಾನ ಪದೇಪದೆ ಆಕ್ಷೇಪ ವ್ಯಕ್ತಪಡಿಸುತ್ತಿತ್ತು. ಈ ಮಧ್ಯೆ, ಯೋಜನೆಯ ನಿರ್ಮಾಣ ಕಾರ್ಯ ಮುಂದುವರಿಸಿಲು ಭಾರತ ನಿರ್ಧರಿಸಿದೆ.
ಈ ಹಿಂದೆ ಸಿಂಧೂ, ಝೆಲಂ, ಚೆನಾಬ್ ನದಿಗಳು ನಮಗೆ ಸೇರಿದ್ದು ಎಂದು ಪಾಕ್ ಪ್ರತಿಪಾದಿಸಿತ್ತು. 1960ರಲ್ಲಿ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಆದ ಜಲ ಒಪ್ಪಂದದ ಪ್ರಕಾರ ರವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳು ನಮಗೆ ಸೇರಿವೆ ಎಂದು ಭಾರತ ವಾದಿಸಿದೆ.
ಪಾಕ್ನಲ್ಲಿ ನೀರಿನ ಕೊರತೆ ಸೃಷ್ಟಿಸಲು ಹಾಗೂ ಪ್ರವಾಹ ಭೀತಿ ಉಂಟು ಮಾಡಲು ಭಾರತ ಜಲಾಶಯಗಳನ್ನು ನಿರ್ಮಿಸುತ್ತಿದೆ ಎಂದು ಪಾಕ್ ಆರೋಪಿಸಿದೆ. ಭಾರತದ ಈ ನಡೆಗೆ ಪಾಕ್ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ದೆಹಲಿ ಸರ್ಕಾರ ನಮಗೆ ನೀರು ಬಾರದಿರುವಂತೆ ನೋಡಿಕೊಳ್ಳಲು ಈ ಯೋಜನೆ ಕೈಗೊಂಡಿದ್ದಾರೆ ಎಂದು ದೂರಿದ್ದಾರೆ.
ಚೆನಾಬ್ ನದಿಯಲ್ಲಿ 850 ಮೆಗಾವ್ಯಾಟ್ ರ್ಯಾಟಲ್ ಜಲ ವಿದ್ಯುತ್ ಸ್ಥಾವರ ನಿರ್ಮಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ ಇಸ್ಲಾಮಾಬಾದ್ನ ಪ್ರಯತ್ನಗಳು ಭಾರತದ ಯೋಜನೆಗೆ ಅಡ್ಡಿಯಾಗಲ್ಲ ಎಂದೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
2012ರಲ್ಲಿ ಪಾಕ್ದುಲ್ ಯೋಜನೆ ಪರಿಶೀಲಿಸಿದ ಪಾಕ್ ನಿಯೋಗ ಭಾರತ ಸಿಂಧ್ ತಾಸ್ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿತ್ತು. ಜತೆಗೆ ಯೋಜನೆಯ ಫ್ರೀ ಬೋರ್ಡ್ ಎತ್ತರವನ್ನು ಏಳು ಅಡಿಗಳಿಂದ 2 ಅಡಿಗೆ ಇಳಿಸಬೇಕು, ಹೆಚ್ಚುವರಿಯಾಗಿ 40 ಮೀಟರ್ ಸೀಲ್ವೇ ಗೇಟ್ಗಳನ್ನು ನಿರ್ಮಿಸಬೇಕೆಂದು ಒತ್ತಾಯಿಸಿತ್ತು.