ಲಡಾಖ್: ಪೂರ್ವ ಲಡಾಖ್ ಗಡಿಯಲ್ಲಿ ಉಂಟಾಗಿದ್ದ ಉದ್ವಿಗ್ನ ವಾತಾವರಣ ತಿಳಿಯಾಗುವ ಮಹತ್ವದ ಸೂಚನೆ ಸಿಕ್ಕಿದೆ. ಕಳೆದ ಶನಿವಾರ ಭಾರತ-ಚೀನಾ ಸೇನಾ ಅಧಿಕಾರಿಗಳ ಮಾತುಕತೆ ನಡೆದ ಬೆನ್ನಲ್ಲೇ ಇಂದು ಉಭಯ ಸೇನೆಗಳು ತಮ್ಮ ಸಿಬ್ಬಂದಿ ಹಾಗೂ ಯುದ್ಧ ವಾಹನಗಳನ್ನು 2.5 ಕಿಲೋ ಮೀಟರ್‌ನಷ್ಟು ಹಿಂದಕ್ಕೆ ಕರೆದುಕೊಂಡಿವೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಹಲವು ದಿನಗಳ ಬಳಿಕ ಚೀನಾದ ಪೀಪಲ್ಸ್ ಲಿಬರೇಷನ್ ಸೇನೆ ಗಲ್ವಾನ್ ಪ್ರದೇಶದಿಂದ 2.5 ಕಿ.ಮೀ ನಷ್ಟು ಹಿಂದೆ ಸರಿದಿದೆ. ಭಾರತ ಕೂಡ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದೆ.