ಇಸ್ಲಾಮಾಬಾದ್: ಪಕ್ಷದೊಳಗೆ ಉಂಟಾಗಿರುವ ಭಿನ್ನಾಭಿಪ್ರಾಯದ ಹಿನ್ನೆಲೆ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ನಾಯಕ ಹಾಗೂ ಇಮ್ರಾನ್ ಖಾನ್ ವಕ್ತಾರ ನದೀಮ್ ಅಫ್ಜಲ್ ಚಾನ್ ರಾಜೀನಾಮೆ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ಮುಸ್ಲಿಂ ಸಮುದಾಯದ 'ಶಿಯಾ ಹಜಾರಾ' ವರ್ಗದ 11 ಮಂದಿ ಕಲ್ಲಿದ್ದಲು ಗಣಿಗಾರಿಕೆ ನೌಕರರನ್ನು ಅಪಹರಿಸಿ ಬಳಿಕ ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಮಚ್ ಹತ್ಯಾಕಾಂಡದ ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿ ಮಾಡಲು ಪ್ರಧಾನ ಮಂತ್ರಿ ವಿಳಂಬ ಮಾಡಿದ ಹಿನ್ನೆಲೆ ನದೀಮ್ ಅಫ್ಜಲ್ ಚಾನ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಬಲೂಚಿಸ್ತಾನದ ನೈರುತ್ಯ ಭಾಗದಲ್ಲಿ ಶಸ್ತ್ರಧಾರಿ ದುಷ್ಕರ್ಮಿಗಳು ಮಾಛ್ ಕಲ್ಲಿದ್ದಲು ಗಣಿಗೆ ನುಗ್ಗಿ ಐವರನ್ನು ಅಪಹರಿಸಿ, ಉಳಿದ ಆರು ಮಂದಿಯನ್ನು ಸ್ಥಳದಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದಕ್ಕೆ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸುವ ಮೂಲಕ ವಿರೋಧ ವ್ಯಕ್ತಪಡಿಸಿದ್ದರು.