ETV Bharat / international

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಗೆ ಇಮ್ರಾನ್ ಸರ್ಕಾರ ಅಂಗೀಕಾರ

author img

By

Published : Feb 2, 2021, 5:39 PM IST

ಯುಎಸ್​​, ಕೆನಡಾದಲ್ಲಿ 100ಕ್ಕೂ ಹೆಚ್ಚು ವ್ಯವಹಾರ ಹೊಂದಿದ್ದು, ಅವರ ಕುಟುಂಬಸ್ಥರು ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ಸುಗ್ರೀವಾಜ್ಞೆಯ ಮೂಲಕ ಪಾಕಿಸ್ತಾನ-ಚೀನಾ ಆರ್ಥಿಕ ಕಾರಿಡಾರ್ ಯೋಜನೆ ಅಂಗೀಕಾರಗೊಂಡಿದೆ..

imran-khans-govt-passes-cpec-authority-bill
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ

ಇಸ್ಲಾಮಾಬಾದ್ : ವಿರೋಧ ಪಕ್ಷದ ಸದಸ್ಯರ ಅಸಮಾಧಾನದ ನಡುವೆಯೇ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಪ್ರಾಧಿಕಾರದ ಮಸೂದೆ ಸೇರಿ ಮೂರು ಮಸೂದೆಗಳನ್ನು ಅಂಗೀಕರಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿಧಾನಸಭೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆ, ವಿದ್ಯುತ್​ ಬೆಲೆ ಹೆಚ್ಚಳ ಕುರಿತ ಚರ್ಚೆಗೆ ಅವಕಾಶ ನೀಡದೆ ತರಾತುರಿಯಲ್ಲಿ ಮಸೂದೆ ಮಂಡನೆಗೆ ಅವಕಾಶ ನೀಡಿದ ಸ್ಪೀಕರ್ ಅಸಾದ್ ಖೈಸರ್ ವಿರುದ್ಧ ಪ್ರತಿಪಕ್ಷಗಳು ಸದನದಲ್ಲಿ ಪ್ರತಿಭಟಿಸಿದವು.

ಈ ವೇಳೆ ಸರ್ಕಾರ ಹಾಗೂ ಸ್ಪಿಕರ್ ವಿರುದ್ಧವೇ ಟೀಕೆ ವ್ಯಕ್ತವಾಗಿದ್ದು, ಸ್ಪೀಕರ್ ಬದಲಿಸುವಂತೆ ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದವು. ಕಳೆದ ಶುಕ್ರವಾರ ಈ ಕಾರಿಡಾರ್ ಕುರಿತಂತೆ ಕೇಳಲಾಗಿದ್ದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದ ಸರ್ಕಾರದ ನೀತಿಯನ್ನು ವಿರೋಧಿಸಿ ಸದಸ್ಯರು ಸದನ ಬಹಿಷ್ಕರಿಸಿ ಹೊರ ನಡೆದಿದ್ದವು.

ಅಲ್ಲದೆ ಪಾಕ್​ನ ನಿವೃತ್ತ ಲೆಫ್ಟಿನೆಂಟ್ ಜನರಲ್ ಆಸಿಮ್ ಸಲೀಮ್ ಬಾಜ್ವಾ ಚೀನಾದ ರಾಯಭಾರಿ ಭೇಟಿಯಾಗಿ ಕಾರಿಡಾರ್ ಸುಗ್ರೀವಾಜ್ಞೆ ಕುರಿತು ಚರ್ಚೆ ನಡೆಸಿದ್ದು, ಟೀಕೆಗೆ ಗುರಿಯಾಗಿತ್ತು.

ಬಾಜ್ವಾ ಅವರು, ವಿದೇಶಗಳಲ್ಲಿ ಹಲವಾರು ವ್ಯವಹಾರ ಹೊಂದಿರುವ ವಿವಾದಾತ್ಮಕ ವ್ಯಕ್ತಿಯಾಗಿದ್ದಾರೆ. ಇವರನ್ನು ಸಿಪಿಇಸಿ ಅಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿತ್ತು.

ಯುಎಸ್​​, ಕೆನಡಾದಲ್ಲಿ 100ಕ್ಕೂ ಹೆಚ್ಚು ವ್ಯವಹಾರ ಹೊಂದಿದ್ದು, ಅವರ ಕುಟುಂಬಸ್ಥರು ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ಸುಗ್ರೀವಾಜ್ಞೆಯ ಮೂಲಕ ಪಾಕಿಸ್ತಾನ-ಚೀನಾ ಆರ್ಥಿಕ ಕಾರಿಡಾರ್ ಯೋಜನೆ ಅಂಗೀಕಾರಗೊಂಡಿದೆ.

ಇದನ್ನೂ ಓದಿ: ಬಲೂಚಿಸ್ತಾನದಲ್ಲಿ ಉರುಳಿ ಬಿದ್ದ ಬಸ್​​: 15 ಸಾವು, 9 ಜನರ ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.