ಇಸ್ಲಾಮಾಬಾದ್: ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಸೆನೆಟ್ ಚುನಾವಣೆಯಲ್ಲಿ 18 ಸ್ಥಾನಗಳನ್ನು ಪಡೆದುಕೊಂಡಿದೆ. ಆದರೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಯೂಸುಫ್ ರಾಝಾ ಗಿಲ್ಲಾನಿ 169 ಮತಗಳನ್ನು ಗಳಿಸುವ ಮೂಲಕ ಪಿಟಿಐನ ಹಫೀಜ್ ಶೇಖ್ ಅವರನ್ನು ಇಸ್ಲಾಮಾಬಾದ್ ಸಾಮಾನ್ಯ ಕ್ಷೇತ್ರದಲ್ಲಿ ಸೋಲಿಸಿದ್ದಾರೆ.
ಜಿಯೋ ನ್ಯೂಸ್‌ನ ವರದಿಯ ಪ್ರಕಾರ, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಎಣಿಕೆ ಮುಗಿದ ನಂತರ ಫಲಿತಾಂಶಗಳನ್ನು ಪ್ರಕಟಿಸಿದ ರಿಟರ್ನಿಂಗ್ ಅಧಿಕಾರಿ, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಒಟ್ಟು 340 ಮತಪತ್ರಗಳಲ್ಲಿ ಆರು ಮತಗಳನ್ನು ತಿರಸ್ಕರಿಸಲಾಗಿದೆ ಎಂದರು.
ಪ್ರಧಾನಿ ಇಮ್ರಾನ್ ಖಾನ್ ಸರ್ಕಾರವು ಉತ್ತಮ ಮತ್ತು ಬಹುಸ್ಥಾನಗಳನ್ನು ಗಳಿಸಿರುವ ಏಕಪಕ್ಷ ಎಂದು ಗುರುತಿಸಿಕೊಂಡಿದೆ. ಆದರೆ ಇಸ್ಲಾಮಾಬಾದ್ ಸೆನೆಟ್ ಸಾಮಾನ್ಯ ಸ್ಥಾನವನ್ನು ಇಮ್ರಾನ್ ಖಾನ್ ಮುಂದಾಳತ್ವದ ಪಿಟಿಐ ಅಭ್ಯರ್ಥಿ ಕಳೆದುಕೊಂಡ ನಂತರ ರಾಷ್ಟ್ರೀಯ ಅಸೆಂಬ್ಲಿಯಿಂದ ವಿಶ್ವಾಸ ಮತ ಚಲಾಯಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಸೆನೆಟ್ ಚುನಾವಣೆಯಲ್ಲಿ ತಮ್ಮ ವಿಜಯದ ಘೋಷಣೆಯ ನಂತರ, ಯೂಸಫ್ ರಝಾ ಗಿಲ್ಲಾನಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು, "ಇದು ಪ್ರಜಾಪ್ರಭುತ್ವದ ವಿಜಯ. ಇಸ್ಲಾಮಾಬಾದ್ ಸ್ಥಾನವು ಸೆನೆಟ್ ಚುನಾವಣೆಯಲ್ಲಿ ಪ್ರಮುಖ ಸ್ಥಾನವಾಗಿತ್ತು. ಎಲ್ಲರೂ ಅದರ ಮೇಲೆ ಕಣ್ಣಿಟ್ಟಿದ್ದರು. ಪಿಡಿಎಂ ವಿಜಯಶಾಲಿಯಾಗಿದೆ" ಎಂದರು.
"ಪ್ರಜಾಪ್ರಭುತ್ವ ಎಂಬುದು ಅತ್ಯುತ್ತಮ ಪ್ರತಿಕಾರ ಜೆಯಾ ಭುಟ್ಟೋ!" ಎಂದು ಪಿಪಿಪಿ ಅಧ್ಯಕ್ಷ ಬಿಲಾವಾಲ್ ಭುಟ್ಟೋ -ಜರ್ದಾರಿ ಅವರು ಗೆಲುವಿನ ನಂತರ ಟ್ವೀಟ್‌ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.