ETV Bharat / international

ಕೊರೊನಾ ತಡೆಗಟ್ಟಲು ಪ್ರತಿಪಕ್ಷಗಳೇ 'ಮುಖ್ಯ ಸಮಸ್ಯೆ'ಯಾಗಿವೆ: ಇಮ್ರಾನ್​ ಖಾನ್ - ಇಮ್ರಾನ್ ಖಾನ್-ಸರ್ಕಾರದ ವಿರುದ್ಧ ಪ್ರತಿಭಟನೆ

ಕೋವಿಡ್​​-19 ಹರಡುತ್ತಿರುವ ಕಾರಣ ಮುಲ್ತಾನ್ ಮತ್ತು ಇತರ ನಗರಗಳಲ್ಲಿ ಸರ್ಕಾರ ವಿರೋಧಿ ರ‍್ಯಾಲಿಗಳನ್ನು ನಡೆಸಲು ರಾಜಕೀಯ ಪಕ್ಷಗಳಿಗೆ ಅನುಮತಿ ನೀಡುವುದಿಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಇಮ್ರಾನ್​ ಖಾನ್
ಇಮ್ರಾನ್​ ಖಾನ್
author img

By

Published : Nov 30, 2020, 4:18 PM IST

ಇಸ್ಲಾಮಾಬಾದ್: ಕೋವಿಡ್​-19ನ ಎರಡನೇ ಅಲೆ ತಡೆಯಲು ಪಾಕಿಸ್ತಾನದ ಅಧಿಕಾರಿಗಳು ಹೆಣಗಾಡುತ್ತಿದ್ದರೆ, ಇತ್ತ ಪ್ರಧಾನಿ ಇಮ್ರಾನ್​ ಖಾನ್​ ಈ ವಿಷಯವಾಗಿ ಪ್ರತಿಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ. ಕೊರೊನಾ ತಡೆಗಟ್ಟಲು ಪ್ರತಿಪಕ್ಷಗಳೇ 'ಮುಖ್ಯ ಸಮಸ್ಯೆ'ಯಾಗಿವೆ ಎಂದಿದ್ದಾರೆ.

ರ‍್ಯಾಲಿಗಳಿಗೆ ಅನುಮತಿ ನೀಡಲು ಅಧಿಕಾರಿಗಳು ನಿರಾಕರಿಸಿದ ಹೊರತಾಗಿಯೂ ಪಾಕಿಸ್ತಾನದ ಪ್ರತಿಪಕ್ಷಗಳು ಸೋಮವಾರ ಮುಲ್ತಾನ್ ಮತ್ತು ಡಿಸೆಂಬರ್ 13ರಂದು ಲಾಹೋರ್​ನಲ್ಲಿ ರ‍್ಯಾಲಿಯನ್ನು ನಡೆಸುವುದಾಗಿ ಪ್ರತಿಜ್ಞೆ ಮಾಡಿದ ನಂತರ ಇಮ್ರಾನ್​ ಖಾನ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಆಸೀಸ್‌ ಮೇಲಿನ ಹಗೆತನ ಹಿನ್ನೆಲೆ.. ಫೇಕ್​ ಇಮೇಜ್​ ಶೇರ್​ ಮಾಡಿದ ಚೀನಾ

"ಕೊರೊನಾ ವೈರಸ್ ಅಪಾಯಕಾರಿಯಾಗಿ ಹರಡುತ್ತಿದೆ. ಆದ್ದರಿಂದ ಪ್ರತಿಪಕ್ಷಗಳು ಪಿಡಿಎಂ ಸಾರ್ವಜನಿಕ ಸಭೆಗಳನ್ನು ಮುಂದೂಡಬೇಕು" ಎಂದು ಪ್ರಧಾನಮಂತ್ರಿ ಸಭೆಯಲ್ಲಿ ವಕ್ತಾರರೊಂದಿಗೆ ಮಾತನಾಡುವಾಗ ಹೇಳಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಪ್ರತಿಭಟಿಸಲು 11 ಪಕ್ಷಗಳ ಒಕ್ಕೂಟವಾದ ಪಾಕಿಸ್ತಾನ ಪ್ರಜಾಸತ್ತಾತ್ಮಕ ಚಳುವಳಿ(ಪಿಡಿಎಂ) ಸರ್ಕಾರದ ವಿರುದ್ಧ ನಾಲ್ಕು ಸಾರ್ವಜನಿಕ ಸಭೆಗಳನ್ನು ಗುಜ್ರಾನ್ವಾಲಾ, ಕರಾಚಿ, ಕ್ವೆಟ್ಟಾ ಮತ್ತು ಪೇಶಾವರದಲ್ಲಿ ನಡೆಸಿದೆ. ಪ್ರತಿಭಟನೆಗಳು ನವೆಂಬರ್ 30 ಮತ್ತು ಡಿಸೆಂಬರ್ 13ರಂದು ಮುಲ್ತಾನ್​ ಹಾಗೂ ಲಾಹೋರ್​ನಲ್ಲಿ ನಡೆಯಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.