ETV Bharat / international

ಕಾಬೂಲ್​ನಿಂದ ಹೊರಟ ವಿಮಾನದ ಚಕ್ರದಲ್ಲಿ ವ್ಯಕ್ತಿಯ ಮೃತದೇಹದ ಅವಶೇಷ ಪತ್ತೆ

ಇತ್ತೀಚೆಗೆ ಕಾಬೂಲ್‌ನಿಂದ ಹೊರಟ (C-17 Globe Master) ವಿಮಾನದಲ್ಲಿ ಅನೇಕ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ವಿಮಾನದ ರೆಕ್ಕೆ, ಚಕ್ರದಲ್ಲಿ ಕುಳಿತುಕೊಂಡು ತೆರಳಿದ್ದರು. ಆ ಸಂದರ್ಭದಲ್ಲಿ ಕೆಲವರು ವಿಮಾನದಿಂದ ಬಿದ್ದು ಪ್ರಾಣವನ್ನೂ ಸಹ ಕಳೆದುಕೊಂಡಿದ್ದರು. ಇದೀಗ ಚಕ್ರದಲ್ಲಿ ವ್ಯಕ್ತಿಯೊಬ್ಬರ ಮೃತದೇಹದ ಅವಶೇಷಗಳು ಕಂಡುಬಂದಿದೆ ಎಂದು ಯುಎಸ್​ ವಾಯುಪಡೆ ತಿಳಿಸಿದೆ.

Kabul
ವಿಮಾನದ ಚಕ್ರದಲ್ಲಿ ಮೃತದೇಹ ಪತ್ತೆ
author img

By

Published : Aug 18, 2021, 10:32 AM IST

ಕಾಬೂಲ್​(ಅಫ್ಘಾನಿಸ್ತಾನ): ತಾಲಿಬಾನ್​ ಉಗ್ರರ ಕಬಂಧಬಾಹುಗಳಲ್ಲಿ ಸಿಲುಕಿ ನರಳುತ್ತಿರುವ ಅಫ್ಘಾನಿಸ್ತಾನ ಸಂಪೂರ್ಣವಾಗಿ ತತ್ತರಿಸಿದೆ. ಅಲ್ಲಿರುವ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಮಾಡಿ ಬೇರೆ ದೇಶಗಳಿಗೆ ತೆರಳಲು ಪ್ರಯತ್ನಿಸುತ್ತಿದ್ದಾರೆ.

ಅದರಂತೆ ಇತ್ತೀಚೆಗೆ ಕಾಬೂಲ್‌ನಿಂದ ಹೊರಟ (C-17 Globe Master) ವಿಮಾನದಲ್ಲಿ ಅನೇಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ವಿಮಾನದ ರೆಕ್ಕೆ, ಚಕ್ರದಲ್ಲಿ ಕುಳಿತುಕೊಂಡು ತೆರಳಿದ್ದರು. ಆ ಸಂದರ್ಭದಲ್ಲಿ ಕೆಲವರು ವಿಮಾನದಿಂದ ಬಿದ್ದು ಪ್ರಾಣವನ್ನೂ ಸಹ ಕಳೆದುಕೊಂಡಿದ್ದರು. ಇದೀಗ ಚಕ್ರದಲ್ಲಿ ವ್ಯಕ್ತಿಯೊಬ್ಬರ ಮೃತದೇಹದ ಅವಶೇಷ ಕಂಡುಬಂದಿದೆ ಎಂದು ಯುಎಸ್​ ವಾಯುಪಡೆ ತಿಳಿಸಿದೆ.

"ಕಾಬೂಲ್​ನಿಂದ ಕತಾರ್​ಗೆ ಬಂದಿಳಿದ ಸಿ -17 ಗ್ಲೋಬ್‌ಮಾಸ್ಟರ್‌ ವಿಮಾನದ ಚಕ್ರದಲ್ಲಿ ವ್ಯಕ್ತಿಯ ಅವಶೇಷ ಪತ್ತೆಯಾಗಿದೆ. ಇದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದ ವಿಡಿಯೋದಿಂದ ಕಂಡುಬಂದಿದೆ" ಎಂದು ಯುಎಸ್ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.

ತಾಲಿಬಾನ್​ ಪಡೆಗೆ ಹೆದರಿ ಸೋಮವಾರದಂದು ಜನರು ಊರುಗಳನ್ನು ತೊರೆಯಲು ಬಸ್​ಗಳನ್ನು ಏರಿದಂತೆ ವಿಮಾನಗಳನ್ನು ಏರುತ್ತಿದ್ದರು. ಅಷ್ಟೇ ಅಲ್ಲದೆ, ಕಾಬೂಲ್​ನಿಂದ ತೆರಳುತ್ತಿದ್ದ ವಿಮಾನದಿಂದ ಇಬ್ಬರು ಕೆಳಗೆ ಬಿದ್ದಿದ್ದರು. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.