ರಿಯಾದ್ (ಸೌದಿ ಅರೇಬಿಯಾ): ವಾರ್ಷಿಕ ಹಜ್ ಯಾತ್ರೆಯ ಸಂದರ್ಭದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸೌದಿ ಅರೇಬಿಯಾ ಪವಿತ್ರ ಹಜ್ ಯಾತ್ರೆಗೆ ನಿರ್ಬಂಧ ವಿಧಿಸಿತ್ತು. ಈಗ ಮತ್ತೆ ಪ್ರಾರಂಭಿಸಲು ತಯಾರಿ ನಡೆಸಿದೆ.
-
Scaled-down hajj pilgrimage to start from July 29: AFP news agency #SaudiArabia
— ANI (@ANI) July 20, 2020 " class="align-text-top noRightClick twitterSection" data="
">Scaled-down hajj pilgrimage to start from July 29: AFP news agency #SaudiArabia
— ANI (@ANI) July 20, 2020Scaled-down hajj pilgrimage to start from July 29: AFP news agency #SaudiArabia
— ANI (@ANI) July 20, 2020
ಸೌದಿ ಅರೇಬಿಯಾದ ಕೇವಲ 1,000 ಜನಕ್ಕೆ ಮಾತ್ರ ಪಾಲ್ಗೊಳ್ಳಲು ಅವಕಾಶವಿರುತ್ತದೆ. ಇಸ್ಲಾಂನ ಅತ್ಯಂತ ಪವಿತ್ರ ಸ್ಮಾರಕ ಕಾಬಾವನ್ನು ಮುಟ್ಟಲು ಅವಕಾಶ ಇರುವುದಿಲ್ಲ. ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿ ಇರ ಲಿದೆ ಎಂದು ಈ ಹಿಂದೆ ಸೌದಿ ಅರೇಬಿಯಾ ಪ್ರಕಟಣೆಯಲ್ಲಿ ತಿಳಿಸಿತ್ತು.
ಇನ್ನು ಜುಲೈ 29ರಿಂದ ಹಜ್ ಯಾತ್ರೆ ಆರಂಭಗೊಳ್ಳಲಿದೆ. ಕೋವಿಡ್ ಲಕ್ಷಣ ಮತ್ತು 65 ವರ್ಷದ ಮೇಲಿನವರಿಗೆ ಹಜ್ ಯಾತ್ರೆ ನಿರ್ಬಂಧವಿದ್ದು, ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಲು ಆಡಳಿತ ಮಂಡಳಿ ಸೂಚಿಸಿದೆ.
ವಾರ್ಷಿಕ ಸಭೆಗಾಗಿ ಈ ಜುಲೈ ಮತ್ತು ಅಗಸ್ಟ್ನಲ್ಲಿ ಸುಮಾರು ಎರಡು ಮಿಲಿಯನ್ ಜನರು ಮೆಕ್ಕಾ ಮತ್ತು ಮದೀನಾಕ್ಕೆ ಪ್ರಯಾಣಿಸುವ ನಿರೀಕ್ಷೆಯಿತ್ತು. ಆದರೆ, ಸೌದಿ ನಿವಾಸಿಗಳಿಗೆ ಮಾತ್ರ ಈ ವರ್ಷ ಹಾಜರಾಗಲು ಅವಕಾಶವಿರುತ್ತದೆ. ಸೌದಿ ಅರೇಬಿಯಾದಲ್ಲಿ ಒಟ್ಟು 2,53,349 ಕೋವಿಡ್-19 ಪ್ರಕರಣ ವರದಿಯಾಗಿದ್ದು, 2,523 ಸೋಂಕಿತರು ಮೃತಪಟ್ಟಿದ್ದಾರೆ.