ಬೀಜಿಂಗ್: ಚೀನಾದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ರುದ್ರತಾಂಡವ ಆಡ್ತಿದೆ. ಇದು ಅಲ್ಲಿನ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಇದರ ಮಧ್ಯೆ ಅಲ್ಲಿನ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಅಮೆರಿಕದ ಇಬ್ಬರು ಪತ್ರಿಕೆ ಪ್ರತಿನಿಧಿಗಳನ್ನ ಗಡಿಪಾರು ಮಾಡಿ ಸಿಟ್ಟು ಹೊರಹಾಕಿದೆ.
ಚೀನಾ ಈಸ್ ದಿ ರಿಯಲ್ ಸಿಕ್ ಮ್ಯಾನ್ ಆಫ್ ಏಷ್ಯಾ(China is the Real Sick Man of Asia) ಎಂಬ ಹೆಡ್ಲೈನ್ ನೀಡಿ ಸಂಪಾದಕೀಯ ಪ್ರಕಟ ಮಾಡಿದ್ದಕ್ಕಾಗಿ ಅಲ್ಲಿನ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದು, ಅವರನ್ನ ದೇಶದಿಂದ ಗಡಿಪಾರು ಮಾಡಲಾಗಿದೆ. ಅಮೆರಿಕ ಮೂಲಕ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ಪ್ರತಿನಿಧಿಗಳು ಈಗಾಗಲೇ ಅಲ್ಲಿಂದ ಗಡಿಪಾರುಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಂಪಾದಕೀಯದಲ್ಲಿ ಕೊರೊನಾ ಸೋಂಕಿನ ಕುರಿತು ಪ್ರಸ್ತಾಪಿಸಲಾಗಿದ್ದು, ಇದು ಅಲ್ಲಿನ ಸರ್ಕಾರದ ಆಕ್ರೋಶಕ್ಕೂ ಕಾರಣವಾಗಿದೆ ಎಂಬ ಮಾತು ಕೇಳಿ ಬಂದಿದೆ.
ಈ ಆರ್ಟಿಕಲ್ ವರ್ಣಭೇದ ನೀತಿಯನ್ನ ಪ್ರಚೋದನೆ ಮಾಡುವ ರೀತಿಯಲ್ಲಿದ್ದ ಕಾರಣ ಈ ನಿರ್ಧಾರ ಕೈಗೊಂಡಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರ ಜತೆಗೆ ಪತ್ರಿಕೆ ಕ್ಷಮೆಯಾಚನೆ ಮಾಡುವಂತೆ ಚೀನಾ ಸರ್ಕಾರ ಆಗ್ರಹಿಸಿದೆ. ಜತೆಗೆ ವಿದೇಶಿ ಮಾಧ್ಯಮದ ವ ಇರುದ್ಧ ಇಷ್ಟೊಂದು ಕಠಿಣ ಕ್ರಮ ಕೈಗೊಂಡಿರುವುದು ಇದೇ ಮೊದಲು ಎಂಬುದು ಗಮನಾರ್ಹ ಸಂಗತಿ.
ಇನ್ನು ವಾಷಿಂಗ್ಟನ್ ಪೋಸ್ಟ್ ಮತ್ತು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರುವ ಪ್ರಕಾರ ಅಲ್ಲಿನ ಸರ್ಕಾರ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿರುವ 53ಕ್ಕೂ ಹೆಚ್ಚು ವರದಿಗಾರರಿಗೆ ಕ್ಷಮೆಯಾಚನೆ ಮಾಡುವಂತೆ ಕೇಳಿದೆ ಎಂದು ತಿಳಿದು ಬಂದಿದೆ.