ETV Bharat / international

ರಷ್ಯಾದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ: ಜಪಾನ್​ನಲ್ಲೂ ನಡುಗಿದ ಭೂಮಿ - ಜಪಾನ್​ನಲ್ಲಿ ಭೂಕಂಪ

ರಷ್ಯಾ ಮತ್ತು ಜಪಾನ್​ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಕ್ರಮವಾಗಿ 6.1 ಮತ್ತು 6ರಷ್ಟು ತೀವ್ರತೆ ದಾಖಲಾಗಿದೆ.

Earthquake
ಭೂಕಂಪ
author img

By

Published : Sep 21, 2021, 8:15 AM IST

Updated : Sep 21, 2021, 9:11 AM IST

ರಷ್ಯಾ/ಜಪಾನ್​: ರಷ್ಯಾದ ಕುರಿಲ್​ ಐಲ್ಯಾಂಡ್​ನಲ್ಲಿ 6.1ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಸೋಮವಾರ ರಾತ್ರಿ 8.25ರ ಸುಮಾರಿಗೆ ಭೂಮಿ ಕಂಪಿಸಿದೆ ಎಂದು ಮೂಲಗಳು ತಿಳಿಸಿವೆ.

Earthquake
ರಷ್ಯಾದಲ್ಲಿ ಭೂಕಂಪ

ರಷ್ಯಾದಿಂದ 3,268 ಕಿ.ಮೀ ದೂರದಲ್ಲಿರುವ ಕುರಿಲ್​ ಐಲ್ಯಾಂಡ್​ನಲ್ಲಿ ಸುಮಾರು 38 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ತಿಳಿದುಬಂದಿದೆ.

ಜಪಾನ್​ನಲ್ಲೂ ಕಂಪಿಸಿದ ಭೂಮಿ: ಜಪಾನ್‌ನಲ್ಲಿ ಇಂದು ತಡರಾತ್ರಿ 1:55ರ (IST) ಸುಮಾರಿಗೆ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಹೇಳಿದೆ. ಭೂಕಂಪವು ಟೋಕಿಯೋದಿಂದ 1,593 ಕಿಲೋಮೀಟರ್ ದೂರದಲ್ಲಿರುವ ಪ್ರದೇಶದಲ್ಲಿ 10 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಇನ್ನು ಕಳೆದ ಫೆಬ್ರವರಿ ತಿಂಗಳಲ್ಲೂ ಈಶಾನ್ಯ ಜಪಾನ್‌ನ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಭೂಕಂಪನವು 7.3ರ ತೀವ್ರತೆ ಹೊಂದಿದ್ದು, ಪ್ರಾಥಮಿಕ ಹಂತದಲ್ಲಿ 7.1ರಿಂದ ಹೆಚ್ಚಳವಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿತ್ತು.

Last Updated : Sep 21, 2021, 9:11 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.