ETV Bharat / international

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಮುಂದುವರಿದ ದಾಳಿ.. 66 ಮನೆ ಧ್ವಂಸ, 20 ಮನೆಗಳಿಗೆ ಬೆಂಕಿ - ಹಿಂದೂಗಳ ಮೇಲೆ ಬಾಂಗ್ಲಾದಲ್ಲಿ ದಾಳಿ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಮುಂದುವರೆದಿದ್ದು, ವರದಿಗಳ ಪ್ರಕಾರ 66 ಮನೆ ಧ್ವಂಸ ಮಾಡಿ, 20 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂಬ ವರದಿ ಬಿತ್ತರಗೊಂಡಿದೆ.

Durga puja violece in Bangaldesh
Durga puja violece in Bangaldesh
author img

By

Published : Oct 18, 2021, 10:34 PM IST

ಢಾಕಾ(ಬಾಂಗ್ಲಾದೇಶ): ಕಳೆದ ಕೆಲ ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿ ದುರ್ಗಾಪೂಜೆ ಸಂದರ್ಭದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸಿ ಮೂವರ ಕೊಲೆ ಮಾಡಿರುವ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಹಿಂದೂಗಳ ಮನೆಗಳ ಮೇಲೆ ದಾಳಿ ಮುಂದುವರೆದಿದೆ. ಹಿಂದೂಗಳನ್ನ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗುತ್ತಿದ್ದು, ಇಲ್ಲಿಯವರೆಗೆ ದುಷ್ಕರ್ಮಿಗಳ ಗುಂಪೊಂದು ಹಿಂದೂಗಳ 66 ಮನೆಗಳನ್ನ ಧ್ವಂಸ ಮಾಡಿದ್ದು, ಕನಿಷ್ಠ 20 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ.

  • The situation in Rangpur is dire at the moment. Homes and temples of Hindus have been burnt down. Muslim mob has set fire to a Hindu village in Pirganj upazila of Rangpur district. @UNHumanRights pic.twitter.com/kDma77F67W

    — Bangladesh Hindu Unity Council (@UnityCouncilBD) October 17, 2021 " class="align-text-top noRightClick twitterSection" data=" ">

ಕಳೆದ ವಾರ ದುರ್ಗಾಪೂಜೆ ಸಂದರ್ಭದಲ್ಲಿ ಹಿಂದೂಗಳು ಹಾಕಿದ್ದ ಪೆಂಡಾಲ್​ಗಳನ್ನ ಸಂಪೂರ್ಣವಾಗಿ ಧ್ವಂಸ ಮಾಡಲಾಗಿತ್ತು. ಜೊತೆಗೆ ದೇವಸ್ಥಾನದ ಮೇಲೂ ದಾಳಿ ನಡೆಸಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಹಿಂದೂಗಳು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ರಂಗಪುರ ಜಿಲ್ಲೆಯ ಗ್ರಾಮವೊಂದರಲ್ಲೇ ನೂರಾರು ದುಷ್ಕರ್ಮಿಗಳ ಗುಂಪು ದುಷ್ಕೃತ್ಯವೆಸಗಿದ್ದಾರೆ. ಸುಮಾರು 66 ಮನೆ ಧ್ವಂಸ ಮಾಡಿದ್ದು, 20ಕ್ಕೂ ಅಧಿಕ ಹಿಂದೂ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.

ಇದನ್ನೂ ಓದಿರಿ: ಅಚ್ಚರಿಯಾದರೂ ನಿಜ...ಒಂದಲ್ಲ, ಎರಡಲ್ಲ, ಬರೋಬ್ಬರಿ ಏಳು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!

ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಗ್ರಾಮದ ಯುವಕನೊಬ್ಬ ಧರ್ಮ ನಿಂದನೆ ಮಾಡಿದ್ದಾರೆಂಬ ಆರೋಪ ಮಾಡಿ ಈ ಕೃತ್ಯವೆಸಗಿದ್ದಾರೆ ಎಂದು ವರದಿಯಾಗಿದೆ. ಹಳ್ಳಿಯ ಬಹುತೇಕ ಮನೆಗಳ ಮೇಲೆ ದಾಳಿ ಮಾಡುತ್ತಿದ್ದಂತೆ ಮನೆಯಲ್ಲಿದ್ದವರೂ ಓಡಿ ಹೋಗಿದ್ದಾರೆ. ಆದರೆ, ಘಟನೆಯಲ್ಲಿ ಯಾವುದೇ ರೀತಿಯ ಸಾವು - ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ 2013ರ ಜನವರಿಯಿಂದ 2021ರ ಸೆಪ್ಟೆಂಬರ್​ವರೆಗೆ ಹಿಂದೂಗಳ ಮೇಲೆ 3,679 ಸಲ ದಾಳಿ ನಡೆಸಲಾಗಿದ್ದು, 559 ಮನೆ ಹಾಗೂ 442 ಅಂಗಡಿ ಧ್ವಂಸಗೊಂಡಿರುವುದಾಗಿ ವರದಿಯಾಗಿದೆ. ಜೊತೆಗೆ 11 ಹಿಂದೂಗಳು ತಮ್ಮ ಪ್ರಾಣ ಕಳೆದುಕೊಂಡಿದ್ದು, 862 ಜನರು ಗಾಯಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.