ಬೀಜಿಂಗ್: ಪೂರ್ವ ಚೀನಾದಲ್ಲಿನ ರಾಸಾಯನಿಕ ಸ್ಥಾವರ ಸ್ಫೋಟಗೊಂಡು 44 ಮಂದಿ ಸಾವನ್ನಪ್ಪಿದ್ದು 90 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೂರ್ವ ಚೀನಾದ ಟಿಯಾಂಜಿಯಾಯಿ ರಾಸಾಯನಿಕ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದ್ದು ಘಟನೆಯನ್ನು ಚೀನಾದ ಈ ವರ್ಷದ ಅತ್ಯಂತ ದೊಡ್ಡ ದುರ್ಘಟನೆ ಎಂದು ಹೇಳಲಾಗಿದೆ.
ರಾಸಾಯನಿಕ ಸೋರಿಕೆಯ ಭೀತಿಯಿಂದ ಘಟನೆಯ ನಡೆದ ತಕ್ಷಣವೇ ಸಾವಿರಕ್ಕೂ ಅಧಿಕ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ.
ಸ್ಫೋಟದ ತೀವ್ರತೆಗೆ ಆರು ಕಿ.ಮೀ ದೂರದಲ್ಲಿನ ಕಟ್ಟಡದ ಕಿಟಕಿ ಹಾಗೂ ಗಾಜುಗಳು ಪುಡಿಪುಡಿಯಾಗಿವೆ.
16 ಆಸ್ಪತ್ರೆಗಳಲ್ಲಿ ಸದ್ಯ 3,500 ವೈದ್ಯಕೀಯ ಸಿಬ್ಬಂದಿ ಗಾಯಾಗಳಿಗೆ ಚಿಕಿತ್ಸೆ ನೀಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ.
2015 ಇಂತಹುದೇ ರಾಸಾಯನಿಕ ಸ್ಥಾವರದಲ್ಲಿ ಸ್ಫೋಟ ಸಂಭವಿಸಿ, ಬರೋಬ್ಬರಿ 173 ಮಂದಿ ಸಾವನ್ನಪ್ಪಿದ್ದರು. ಈಗ ಮತ್ತೊಂದು ದುರ್ಘಟನೆ ಸಂಭವಿಸಿದ್ದು ಸ್ಥಾವರಗಳ ಭದ್ರತೆಯಲ್ಲಿ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳು ವೈಫಲ್ಯ ಅನುಭವಿಸಿದ್ದಾರೆ ಎನ್ನುವುದು ಮತ್ತೆ ಸಾಬೀತಾಗಿದೆ.