ಮನಿಲಾ: ಫಿಲಿಪ್ಪೀನ್ಸ್ನಲ್ಲಿ 'ಮೊಲೇವ್' ಚಂಡಮಾರುತ ಅಬ್ಬರಿಸುತ್ತಿದ್ದು, ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ನಾಲ್ವರು ಕಾಣೆಯಾಗಿದ್ದು, 22 ಜನರು ಗಾಯಗೊಂಡಿದ್ದಾರೆ.
ಮೊದಲು ಮೊಲೇವ್ ಚಂಡಮಾರುತವು ಭಾನುವಾರ ಸಂಜೆ ಫಿಲಿಪ್ಪೀನ್ಸ್ನ ರಾಜಧಾನಿಯಾದ ಮನಿಲಾದ ದಕ್ಷಿಣ ಭಾಗದ ತಬಾಕೊ ನಗರಕ್ಕೆ ಅಪ್ಪಳಿಸಿತ್ತು. ಭಾನುವಾರದಿಂದ ಗುರುವಾರದ ವರೆಗೆ ಮೊಲೇವ್ ಚಂಡಮಾರುತವು 63 ಪ್ರದೇಶಳಲ್ಲಿ ಪ್ರವಾಹ ಹಾಗೂ 22 ಪ್ರದೇಶಗಳಲ್ಲಿ ಭೂಕುಸಿತವನ್ನುಂಟುಮಾಡಿದೆ.
ಮನೆ-ಮಠ ಕಳೆದುಕೊಂಡು ದ್ವೀಪ ಪ್ರದೇಶದ 2,42,000 ಜನರು ಸ್ಥಳಾಂತರಗೊಂಡಿದ್ದಾರೆ. 65,000 ಜನರನ್ನು 916 ನಿರಾಶ್ರಿತರ ಕೇಂದ್ರಗಳಿಗೆ ಕಳುಹಿಸಲಾಗಿದೆ. 105 ರಸ್ತೆಗಳು, 22 ಸೇತುವೆಗಳು, ಸಾವಿರಾರು ಎಕರೆ ಬೆಳೆಗಳು ಹಾನಿಯಾಗಿವೆ ಎಂದು ಅಲ್ಲಿನ ವಿಪತ್ತು ನಿರ್ವಹಣಾ ಮಂಡಳಿ (ಎನ್‌ಡಿಆರ್‌ಆರ್‌ಎಂಸಿ) ಮಾಹಿತಿ ನೀಡಿದೆ.
ಕೋವಿಡ್ ಸಾಂಕ್ರಾಮಿಕದ ನಡುವೆ ಈ ವರ್ಷ ಫಿಲಿಪ್ಪೀನ್ಸ್ನಲ್ಲಿ ಉಂಟಾದ 17ನೇ ಚಂಡಮಾರುತ ಇದಾಗಿದೆ.