ETV Bharat / international

ಚೀನಾ ಸರ್ಕಾರವನ್ನು ಟೀಕಿಸಿದ ಆಡಳಿತ ಪಕ್ಷದ ನಾಯಕನಿಗೆ 18 ವರ್ಷ ಜೈಲು

ಈ ಹಿಂದೆ ಸೈನ್ಯದಲ್ಲಿ ರೇನ್‌ ಕೆಲಸ ಮಾಡಿದ್ದರು. ಇವರ ತಂದೆ, ತಾಯಿ ಇಬ್ಬರೂ ಕೂಡ ಕಮ್ಯೂನಿಸ್ಟ್‌ ಪಕ್ಷದಲ್ಲಿ ಉನ್ನತ ಅಧಿಕಾರಿಗಳಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದವರು. 2012ರಿಂದ ಕಮ್ಯೂನಿಸ್ಟ್‌ ಪಾರ್ಟಿಯಿಂದ ಆಡಳಿತ ನಡೆಸುತ್ತಿರುವ ಕ್ಸಿಜಿಂಗ್‌ ಪಿಂಗ್, ತಮ್ಮ ಸರ್ಕಾರದ ವಿರುದ್ಧ ಯಾರೇ ನಕರಾತ್ಮಕವಾಗಿ ವಿಮರ್ಶೆ ಮಾಡಿದ್ರೂ ಅವರನ್ನು ಮಟ್ಟ ಹಾಕುವ ಕೆಲಸ ಮಾಡುತ್ತಲೇ ಬಂದಿದ್ದಾರೆ..

Critic of Chinese leader sentenced to 18 years in graft case
ಚೀನಾ ಸರ್ಕಾರವನ್ನು ಟೀಕಿಸಿದ ಪಕ್ಷದ ನಾಯಕನಿಗೆ 18 ವರ್ಷ ಜೈಲು
author img

By

Published : Sep 22, 2020, 5:48 PM IST

ಬೀಜಿಂಗ್ ‌: ಕೊರೊನಾ ನಿಯಂತ್ರಿಸುವಲ್ಲಿ ಚೀನಾ ಸರ್ಕಾರ ವಿಫಲವಾಗಿದೆ ಎಂದು ಕ್ಸಿ ಜಿಂಗ್‌ಪಿಂಗ್‌ ಸರ್ಕಾರವನ್ನು ಟೀಕಿಸಿದ್ದ ಸರ್ಕಾರಿ ಒಡೆತನದ ರಿಯಲ್‌ ಎಸ್ಟೇಟ್‌ ಕಂಪನಿಯ ಮಾಜಿ ಚೇರ್ಮನ್‌ ರೇನ್‌ ಝಿಂಕಿಯಾಂಗ್‌ಗೆ ಅಲ್ಲಿನ ಕೋರ್ಟ್‌ 18 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಮೊದಲು ಈತನ ಮೇಲೆ ಭ್ರಷ್ಟಾಚಾರ ಪ್ರಕರಣ ದಾಖಲಿಸಲಾಗಿತ್ತು.

ಭ್ರಷ್ಟಾಚಾರದ ಜೊತೆ ಲಂಚ ಸ್ವೀಕಾರ, ಸರ್ಕಾರದ ಹಣ ದುರ್ಬಳಕೆ, ಅಧಿಕಾರ ದುರುಪಯೋಗ ಸೇರಿ ಹಲವು ಆರೋಪ ಪ್ರಕರಣಗಳಲ್ಲಿ ರೇನ್‌ ಝಿಂಕಿಯಾಂಗ್‌ ದೋಷಿ ಎಂದು ಅಲ್ಲಿನ ಇಂಟರ್‌ ಮೀಡಿಯೇಟ್‌ ಕೋರ್ಟ್‌ ಆದೇಶ ನೀಡಿದೆ. ಈ ನಿರ್ಧಾರವನ್ನು ಕೋರ್ಟ್‌ ತನ್ನ ಸಾಮಾಜಿಕ ಮಾಧ್ಯಮದ ಮೂಲಕ ಪ್ರಕಟಿಸಿದೆ.

ಕೊರೊನಾ ನಿಯಂತ್ರಣ, ಸೆನ್ಸಾರ್‌ಶಿಪ್‌ ಅಂಶಗಳ ಮೇಲೆ ರೆನ್‌ ಝಿಂಕಿಯಾಂಗ್‌ ಸತ್ಯಾಂಶವನ್ನು ಹೇಳಿದ್ದರು. ಡಿಸೆಂಬರ್‌ನಲ್ಲಿ ವುಹಾನ್‌ನಲ್ಲಿ ಆರಂಭವಾದ ಕೋವಿಡ್‌ ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ ಎಂದು ಕ್ಸಿ ಜಿಂಗ್‌ಪಿಂಗ್‌ ವಿರುದ್ಧ ಆರೋಪ ಮಾಡಲಾಗಿತ್ತು. ಈ ಸಂಬಂಧ ಮಾರ್ಚ್‌ನಲ್ಲಿ ದೂರು ದಾಖಲಾಗಿತ್ತು.

ಇದಾದ ಬಳಿಕ ರೇನ್‌, ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಿರಲಿಲ್ಲ. ಆಡಳಿತ ಪಕ್ಷದ ಸದಸ್ಯರೂ ಆಗಿದ್ದ ಇವರನ್ನು‌ ಜುಲೈನಲ್ಲಿ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಫೆಬ್ರವರಿಯಲ್ಲಿ ಕ್ಸಿ ಜಿನ್‌ಪಿಂಗ್‌ 1 ಲಕ್ಷ 70 ಸಾವಿರ ಮಂದಿ ಅಧಿಕಾರಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿದ್ದರು. ಇದರಲ್ಲಿ ಕೊರೊನಾ ನಿಯಂತ್ರಣಕ್ಕೆ ಮಾರ್ಗದರ್ಶನಗಳನ್ನು ನೀಡುವಂತೆ ಸೂಚಿಸಿದ್ರು.

ಆಗ ರೇನ್‌, ರೋಗ ಎಲ್ಲಿಂದ ಆರಂಭವಾಯಿತು ಎಂಬುದನ್ನು ತಿಳಿಸಿದರು. ಆದರೆ, ಇದನ್ನು ಅಧಿಕೃತವಾಗಿ ಪ್ರಕಟಿಸಿಲ್ಲ ಎಂದು ಆರೋಪಿಸಿದರು. ಯಾರೂ ಕೂಡ ಇದರ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ, ತಮ್ಮ ದೊಡ್ಡ ಸಾಧನೆಗಳ ಮೂಲಕ ಸತ್ಯವನ್ನು ಮರೆಮಾಚುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದು ಜಿಂಗ್‌ಪಿಂಗ್‌ ಕಣ್ಣನ್ನು ಕೆಂಪಾಗಿಸಿತ್ತು.

ಈ ಹಿಂದೆ ಸೈನ್ಯದಲ್ಲಿ ರೇನ್‌ ಕೆಲಸ ಮಾಡಿದ್ದರು. ಇವರ ತಂದೆ, ತಾಯಿ ಇಬ್ಬರೂ ಕೂಡ ಕಮ್ಯೂನಿಸ್ಟ್‌ ಪಕ್ಷದಲ್ಲಿ ಉನ್ನತ ಅಧಿಕಾರಿಗಳಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದವರು. 2012ರಿಂದ ಕಮ್ಯೂನಿಸ್ಟ್‌ ಪಾರ್ಟಿಯಿಂದ ಆಡಳಿತ ನಡೆಸುತ್ತಿರುವ ಕ್ಸಿಜಿಂಗ್‌ ಪಿಂಗ್, ತಮ್ಮ ಸರ್ಕಾರದ ವಿರುದ್ಧ ಯಾರೇ ನಕರಾತ್ಮಕವಾಗಿ ವಿಮರ್ಶೆ ಮಾಡಿದ್ರೂ ಅವರನ್ನು ಮಟ್ಟ ಹಾಕುವ ಕೆಲಸ ಮಾಡುತ್ತಲೇ ಬಂದಿದ್ದಾರೆ. ನೂರಾರು ಮಂದಿ ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರನ್ನು ಜೈಲುಗಳಲ್ಲಿಟ್ಟಿದ್ದಾರೆ. ಅನಧಿಕೃತ ಸಂಘಟನೆಗಳನ್ನು ರದ್ದು ಮಾಡಿ, ಸೆನ್ಸಾರ್‌ಶಿಪ್‌ ಕಠಿಣಗೊಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.