ETV Bharat / international

ಪ್ರಥಮ ಬಾರಿಗೆ ವುಹಾನ್ ಲ್ಯಾಬ್ ಚಿತ್ರ ಬಹಿರಂಗಪಡಿಸಿದ ಚೀನಾ! - ಚೀನಾ ವೈರಸ್

ವುಹಾನ್​ನ ಪಿ-4 ಲ್ಯಾಬ್​ನ ಸಂಕ್ಷಿಪ್ತ ಮಾಹಿತಿಯನ್ನು ಮಾತ್ರ ಸಿಸಿಟಿವಿ ವಾಹಿನಿ ನೀಡಿದ್ದು, ದಪ್ಪ ಗಾಜಿನ ಆವರಣದ ಹೊರಗಿನಿಂದ ಸೆರೆ ಹಿಡಿಯಲಾದ ಕೆಲ ಚಿತ್ರಗಳು ಇವಾಗಿವೆ. ಆದರೂ ಲ್ಯಾಬ್​ನಲ್ಲಿ ಯಾವೆಲ್ಲಾ ಚಟುವಟಿಕೆಗಳು ನಡೆಯುತ್ತಿವೆ ಎಂಬುದರ ಬಗ್ಗೆ ಮಾತ್ರ ಚೀನಾ ಸರ್ಕಾರ ಮೌನವಾಗಿದೆ.

Wuhan lab
Wuhan lab
author img

By

Published : Jul 10, 2020, 6:53 PM IST

ಬೀಜಿಂಗ್: ಕೋವಿಡ್​-19 ವೈರಸ್​ ಹುಟ್ಟಿಗೆ ಕಾರಣವಾಗಿ, ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಚೀನಾ ಕೊನೆಗೂ ವುಹಾನ್​ ಲ್ಯಾಬ್​ನ ಕೆಲವೇ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಕೊರೊನಾ ವೈರಸ್​ ಸೃಷ್ಟಿಸಲಾಗಿದೆ ಎಂದು ಹೇಳಲಾದ ವುಹಾನ್ ಲ್ಯಾಬ್ ಚಿತ್ರಗಳನ್ನು ಚೀನಾ ಸರ್ಕಾರದ ವಾಹಿನಿ ಸಿಸಿಟಿವಿ ಬಿಡುಗಡೆ ಮಾಡಿದೆ.

ವುಹಾನ್​ನ ಪಿ-4 ಲ್ಯಾಬ್​ನ ಸಂಕ್ಷಿಪ್ತ ಮಾಹಿತಿಯನ್ನು ಮಾತ್ರ ಸಿಸಿಟಿವಿ ವಾಹಿನಿ ನೀಡಿದ್ದು, ದಪ್ಪ ಗಾಜಿನ ಆವರಣದ ಹೊರಗಿನಿಂದ ಸೆರೆ ಹಿಡಿಯಲಾದ ಕೆಲ ಚಿತ್ರಗಳು ಇವಾಗಿವೆ. ಆದರೂ ಲ್ಯಾಬ್​ನಲ್ಲಿ ಯಾವೆಲ್ಲಾ ಚಟುವಟಿಕೆಗಳು ನಡೆಯುತ್ತಿವೆ ಎಂಬುದರ ಬಗ್ಗೆ ಮಾತ್ರ ಚೀನಾ ಸರ್ಕಾರ ಮೌನವಾಗಿದೆ. 2017ರಲ್ಲಿ ಈ ಲ್ಯಾಬ್ ಆರಂಭಗೊಂಡಿದ್ದು, ಅಂದಿನಿಂದಲೇ ಇಲ್ಲಿ ಅತಿ ಭಯಾನಕವಾದ ಕ್ಲಾಸ್-4 ವೈರಾಣುಗಳನ್ನು ತಯಾರಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಕೋವಿಡ್​-19 ವೈರಸ್​ ಹುಟ್ಟಿಗೆ ಕಾರಣಗಳನ್ನು ಅಧ್ಯಯನ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯ ಎರಡು ತಂಡಗಳು ಈಗಾಗಲೇ ರಾಜಧಾನಿ ಬೀಜಿಂಗ್​ಗೆ ತೆರಳಿದ್ದು, ಮುಂದಿನ ಎರಡು ದಿನಗಳ ಕಾಲ ವೈರಸ್​ ಹರಡುವಿಕೆಯ ಬಗ್ಗೆ ಸಂಶೋಧನೆ ನಡೆಸಲಿವೆ.

ಪ್ರಾಣಿಯಿಂದ ಮಾನವರಿಗೆ ವೈರಸ್​ ಹೇಗೆ ಹರಡಿತು ಎಂಬುದರ ಕುರಿತಾಗಿ ವೈದ್ಯಕೀಯ ತಜ್ಞರು ಹಾಗೂ ಸಾಂಕ್ರಾಮಿಕ ರೋಗ ತಜ್ಞರು ಅಧ್ಯಯನ ನಡೆಸಲಿದ್ದಾರೆ. ಮೊದಲಿಗೆ ಬಾವಲಿಗಳಲ್ಲಿ ಕೊರೊನಾ ವೈರಸ್​ ಸೃಷ್ಟಿಯಾಗಿ ನಂತರ ಬೆಕ್ಕು ಅಥವಾ ಪ್ಯಾಂಗೊಲಿನ್​ಗಳ ದೇಹ ಸೇರಿದ್ದು, ಈ ಪ್ರಾಣಿಗಳ ಮಾಂಸ ಸೇವಿಸಿದ ಮಾನವರ ಶರೀರಕ್ಕೆ ವೈರಸ್​ ವರ್ಗಾವಣೆಯಾಗಿದೆ ಎಂದು ವಿಜ್ಞಾನಿಗಳು ಸದ್ಯಕ್ಕೆ ನಂಬಿದ್ದಾರೆ.

ಮೇ ತಿಂಗಳಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ ವಿಶ್ವದ 120 ರಾಷ್ಟ್ರಗಳು, ವೈರಸ್​ ಹುಟ್ಟಿನ ಮೂಲವನ್ನು ಶೋಧಿಸಬೇಕೆಂದು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.