ETV Bharat / international

ಕೊರೊನಾ ಭೀತಿ...ಮಾಸ್ಕ್​ಗಳಿಗೆ ಹೆಚ್ಚಿದ ಬೇಡಿಕೆ: ಆಸ್ಪತ್ರೆಯಿಂದ 2 ಸಾವಿರ ಮಾಸ್ಕ್​ ಕಳ್ಳತನ - ಕೊರೊನಾ ವೈರಸ್​

ಚೀನಾದಲ್ಲಿ ಲಗ್ಗೆ ಹಾಕಿ ಇದೀಗ ಬೇರೆ ಬೇರೆ ದೇಶಗಳಿಗೆ ವೈರಲ್​ ಆಗಿರುವ ಕೊರೊನಾ ಸೋಂಕಿನಿಂದ ಜನರು ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

coronavirus
coronavirus
author img

By

Published : Mar 4, 2020, 12:07 PM IST

ಫ್ರಾನ್ಸ್​: ಮಹಾಮಾರಿ ಕೊರೊನಾ ವೈರಸ್​ನಿಂದ 60 ದೇಶಗಳು ನಲುಗಿ ಹೋಗಿದ್ದು, ಚೀನಾದಲ್ಲೇ ಬರೋಬ್ಬರಿ 2,900ಕ್ಕೂ ಅಧಿಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮ ಜೀವ ರಕ್ಷಣೆ ಮಾಡಿಕೊಳ್ಳಲು ಜನರು ಮಾಸ್ಕ್​ ಹಾಕಿಕೊಂಡು ಜೀವನ ನಡೆಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.

ಫ್ರಾನ್ಸ್​​ನಲ್ಲೂ ಕೆಲವೊಂದು ಕೊರೊನಾ ಪ್ರಕರಣ ಕಂಡು ಬಂದಿದ್ದು, ಆಸ್ಪತ್ರೆಯಲ್ಲಿ ಇರಿಸಲಾಗಿದ್ದ 2 ಸಾವಿರ ಸರ್ಜಿಕಲ್​​ ಮಾಸ್ಕ್​ ಕಳ್ಳತನ ಮಾಡಲಾಗಿದೆ. ಮಾರ್ಸೆಲ್ಲೆಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ರಾತ್ರೋರಾತ್ರಿ ಅಲ್ಲಿನ ಮಾಸ್ಕ್​ ಕಳ್ಳತನ ಮಾಡಲಾಗಿದೆ ಎಂದು ದೂರು ದಾಖಲು ಮಾಡಲಾಗಿದೆ.

ಆಸ್ಪತ್ರೆಯಲ್ಲಿನ ಸಿಬ್ಬಂದಿ, ವೈದ್ಯರು ಹಾಗೂ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರಿಗೆ ನೀಡಲು ಈ ಮಾಸ್ಕ್​ ಆಸ್ಪತ್ರೆಯಲ್ಲಿ ಕೊಠಡಿಯಲ್ಲಿಡಲಾಗಿತ್ತು. ಆದರೆ, ಅವುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕಳ್ಳತನ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕೊರೊನಾ ಮಹಾಮಾರಿ ಈಗಾಗಲೇ 3 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ಅತಿ ಹೆಚ್ಚು ಅಂದರೆ 2,900 ಜನರು ಚೀನಾ, ಇರಾನ್​ನಲ್ಲಿ 77, ಇಟಲಿ 52 ದಕ್ಷಿಣ ಕೊರಿಯಾದಲ್ಲಿ 13 ಹಾಗೂ ಅಮೆರಿಕದಲ್ಲಿ 6 ಮಂದಿ ಮೃತಪಟ್ಟಿದ್ದು, 80ಸಾವಿರಕ್ಕೂ ಅಧಿಕ ಮಂದಿ ಈ ಸೋಂಕಿನಿಂದ ಬಳಲುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.