ಕಾಠ್ಮಂಡು: ಚೀನಾದ ರಕ್ಷಣಾ ಸಚಿವ ಮತ್ತು ಸ್ಟೇಟ್ ಕೌನ್ಸಿಲರ್ ವೀ ಫೆಂಗ್ ನವೆಂಬರ್ 29 ರಂದು ನೇಪಾಳಕ್ಕೆ ಭೇಟಿ ನೀಡಲಿದ್ದಾರೆ.
ಚೀನಾ ಮತ್ತು ನೇಪಾಳ ಈ ಭೇಟಿಯನ್ನು ಇನ್ನೂ ಅದಿಕೃತವಾಗಿ ಪ್ರಕಟಿಸಿಲ್ಲ. ಕಠ್ಮಂಡುವಿನಲ್ಲಿನ ಅನೇಕ ಮಾಧ್ಯಮಗಳ ವರದಿಗಳ ಪ್ರಕಾರ, ವೀ ಫೆಂಗ್ ಈ ಭೇಟಿಯನ್ನು ಕೈಗೊಳ್ಳಲಿದ್ದಾರೆಂದು ತಿಳಿದುಬಂದಿದೆ. ಭಾರತವು ಗಡಿ ವಿವಾದದ ಹಿನ್ನೆಲೆ ತನ್ನ ಉನ್ನತ ಮಟ್ಟದ ಅಧಿಕಾರಿಗಳನ್ನು ಕಠ್ಮಂಡುವಿಗೆ ಕಳುಹಿಸುತ್ತಿರುವ ಸಮಯದಲ್ಲಿ ಚೀನಾ ಅಧಿಕಾರಿಗಳು ಸಹ ಭೇಟಿ ನೀಡಲಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಪ್ರವಾಸದ ನಂತರ ನೇಪಾಳಕ್ಕೆ ಹೆಚ್ಚು ಭೇಟಿ ನೀಡಿದ ಚೀನಾದ ಮೊದಲ ಅಧಿಕಾರಿ ವೀ ಆಗಿದ್ದಾರೆ. ಸದ್ಯ ಅವರ ಭೇಟಿಯನ್ನು ಪ್ರಮುಖವೆಂದು ಪರಿಗಣಿಸಲಾಗುತ್ತಿದೆ.