ETV Bharat / international

ಪಿಎಲ್​ಎ ಸೈನಿಕರ ವಿರುದ್ಧ ಸುಳ್ಳು ಪೋಸ್ಟ್: ಚೈನೀಸ್​ ಬ್ಲಾಗರ್​ ಬಂಧನ - ಚೀನಾದಲ್ಲಿ ಬ್ಲಾಗರ್ ಬಂಧನ

ಈ ಹಿಂದೆ, ಗಾಲ್ವಾನ್ ಗಡಿಯಲ್ಲಿ ಭಾರತೀಯ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಮೃತಪಟ್ಟ ಪಿಎಲ್​ಎ ಸೈನಿಕರನ್ನು ಅವಮಾನಿಸಿದ ಇಬ್ಬರು ವೆಬ್ ಬಳಕೆದಾರರನ್ನು ಬಂಧಿಸಲಾಗಿತ್ತು.

author img

By

Published : Feb 22, 2021, 4:18 PM IST

ಬೀಜಿಂಗ್ : ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕರ ವಿರುದ್ಧ ಸುಳ್ಳು ಮಾಹಿತಿ ಪೋಸ್ಟ್ ಮಾಡಿದ ಆರೋಪದಲ್ಲಿ, ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಬ್ಲಾಗರ್​​ ಅನ್ನು ಬಂಧಿಸಲಾಗಿದೆ ಎಂದು ಗ್ಲೋಬಲ್​ ಟೈಮ್ಸ್ ವರದಿ ಮಾಡಿದೆ.

ಈ ಹಿಂದೆ, ಗಾಲ್ವಾನ್ ಗಡಿಯಲ್ಲಿ ಭಾರತೀಯ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಮೃತಪಟ್ಟ ಪಿಎಲ್​ಎ ಸೈನಿಕರನ್ನು ಅವಮಾನಿಸಿದ ಇಬ್ಬರು ವೆಬ್ ಬಳಕೆದಾರರನ್ನು ಬಂಧಿಸಲಾಗಿತ್ತು.

ನೈರುತ್ಯ ಸಿಚುವಾನ್ ಪ್ರಾಂತ್ಯದ ಮಿಯನ್ಯಾಂಗ್ ನಗರದಲ್ಲಿ ಯಾಂಗ್ ಎಂಬ 25 ವರ್ಷದ ಬ್ಲಾಗರ್​​ ಅನ್ನು ಬಂಧಿಸಲಾಗಿದೆ. ಇಂಡೋ - ಚೀನಾ ಗಡಿ ಸಂಘರ್ಷದಲ್ಲಿ ಮೃತಪಟ್ಟ ಸೈನಿಕರ ವಿರುದ್ಧ ಯಾಂಗ್​ ಸುಳ್ಳು ಮಾಹಿತಿ ಪೋಸ್ಟ್ ಮಾಡಿದ್ದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ದೊಡ್ಡಮಟ್ಟದ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ, ಯಾಂಗ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದ. ಸದ್ಯ ಆತನನ್ನು 7 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.