ಬೀಜಿಂಗ್ (ಚೀನಾ): ದೀರ್ಘಕಾಲದ ಬಳಿಕ ಅಮೆರಿಕ - ಚೀನಾ ವ್ಯಾಪಾರ ಒಪ್ಪಂದದ ಕುರಿತು ವಾಸ್ತವಿಕ ಸಭೆ ನಡೆಸಿವೆ. ಈ ಕುರಿತು ಚೀನಾದ ವಾಣಿಜ್ಯ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ಹೇಳಿಕೆಯ ಪ್ರಕಾರ, ಟ್ರಂಪ್ ಆಡಳಿತದಲ್ಲಿ ಮಾಡಿಕೊಳ್ಳಲಾಗಿದ್ದ ಹಂತ -1 (Phase-1) ವ್ಯಾಪಾರ ಒಪ್ಪಂದದ ಕುರಿತು ಚರ್ಚಿಸಲು ಚೀನಾದ ಉನ್ನತ ವ್ಯಾಪಾರ ಸಮಲೋಚಕ ಲಿಯು, ಅಮೆರಿಕದ ವ್ಯಾಪಾರ ಪ್ರತಿನಿಧಿ ಕ್ಯಾಥರೀನ್ ತಾಯ್ ಅವರನ್ನು ಆಹ್ವಾನಿಸಿದ್ರು.
ಸಭೆಯಲ್ಲಿ ಉಭಯ ನಾಯಕರು ವ್ಯಾಪಾರ ಸಂಬಂಧ ಪ್ರಾಯೋಗಿಕ, ಪ್ರಾಮಾಣಿಕ, ರಚನಾತ್ಮಕ ವಿನಿಮಯಗಳನ್ನು ನಡೆಸಿದ್ರು. ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಪೊಲಿಟ್ ಬ್ಯೂರೊ ಸದಸ್ಯ ಲಿಯು, ಚೀನಾದ ಸರಕುಗಳ ಮೇಲೆ ಅಮೆರಿಕ ವಿಧಿಸುವ ಹೆಚ್ಚುವರಿ ಸುಂಕ ಮತ್ತು ನಿರ್ಬಂಧಗಳನ್ನು ರದ್ದುಗೊಳಿಸುವಂತೆ ಅಮೆರಿಕಕ್ಕೆ ಒತ್ತಾಯಿಸಿದರು.
ಟ್ರಂಪ್ ಆಡಳಿತದಲ್ಲಿ ಬೀಜಿಂಗ್‌ನ ಕೈಗಾರಿಕಾ ನೀತಿ ಮತ್ತು ಚೀನಾದ ಆಮದುಗಳ ಮೇಲೆ ಸುಂಕವನ್ನು ಹೆಚ್ಚಿಸಲಾಗಿತ್ತು. ಅಮೆರಿಕ ಸೋಯಾಬೀನ್ ಖರೀದಿಯನ್ನು ಸ್ಥಗಿತಗೊಳಿಸುವ ಮೂಲಕ ಮತ್ತು ಇತರ ಸರಕುಗಳ ಮೇಲೆ ಸುಂಕವನ್ನು ಹೆಚ್ಚಿಸುವ ಮೂಲಕ ಚೀನಾ ಪ್ರತೀಕಾರ ತೀರಿಸಿಕೊಂಡಿತು.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತವು ಹೆಚ್ಚಿನ ಸುಂಕಗಳು ಮತ್ತು ಬೀಜಿಂಗ್‌ನಿಂದ ದೂರುಗಳನ್ನು ಪಡೆದ ಇತರ ಹಲವು ನೀತಿಗಳನ್ನು ಬದಲಿಸಿದೆ. ಅಲ್ಲದೇ, ಅಮೆರಿಕ ದ್ವಿಪಕ್ಷೀಯ ಚರ್ಚೆಗಳಲ್ಲಿ ಹೆಚ್ಚು ಸೌಹಾರ್ದತೆಯನ್ನು ಬಯಸಿದೆ. ಸಭೆಯಲ್ಲಿ ಲಿಯು ತನ್ನ ಪ್ರಸ್ತುತ ಆರ್ಥಿಕ ಅಭಿವೃದ್ಧಿ ಮಾದರಿ ಮತ್ತು ಕೈಗಾರಿಕಾ ನೀತಿಗಳ ಬಗ್ಗೆ ದೇಶದ ನಿಲುವನ್ನು ವಿವರಿಸಿದರು.
ಇದನ್ನೂ ಓದಿ: ತಿಮ್ಮಪ್ಪನ ಭಕ್ತರಿಗಾಗಿ ವಿಶೇಷ ಆ್ಯಪ್ ವಿನ್ಯಾಸ: ರಿಲಯನ್ಸ್ ಜಿಯೋ ಜತೆ TTD ಒಪ್ಪಂದ
ಕೋವಿಡ್ ಬಿಕ್ಕಟ್ಟಿನ ನಂತರ ಚೀನಾದಲ್ಲಿ ಆರ್ಥಿಕತೆ ಪುಟಿದೆದ್ದಿದೆ. ಆದರೆ, ಕಾರ್ಪೊರೇಟ್ ಮತ್ತು ಸ್ಥಳೀಯ ಸರ್ಕಾರದ ಸಾಲಗಳು, ಮತ್ತು ಹೈಟೆಕ್ ರಫ್ತುಗಳ ಮೇಲೆ ನಿರ್ಬಂಧಗಳು ಹೆಚ್ಚಿವೆ.